ಮುಂಬಯಿ: ಇದೇ ಮೊದಲ ಬಾರಿಗೆ ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯ ಅತಿ ಎತ್ತರದ ಶಿಖರವಾದ ಕಳಸುಬಾಯಿ ಶಿಖರದಲ್ಲಿ ಜನವರಿ 26ರಂದು ಭಾರತದ ತ್ರಿರ್ಣ ಧ್ವಜ ಹಾರಿಸುವ ಅಧಿಕೃತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ವರ್ಷದುದ್ದಕ್ಕೂ ಇಲ್ಲಿಗೆ ಆಗಮಿಸುವ ಸಾಹಸ ಪ್ರಿಯರು, ಪಾದಯಾತ್ರಿಗಳು, ಟ್ರೆಕಿಂಗ್ ನಡೆಸುವ ತಂಡಗಳ ಜನರಲ್ಲಿ ದೇಶಭಕ್ತಿಯನ್ನು ಮೂಡಿಸುವುದರೊಂದಿಗೆ ಪ್ರವಾಸೋದ್ಯಮವನ್ನು ಪಚುರಪಡಿಸುವುವ ಕಲ್ಪನೆಯೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವೈಶಿಷ್ಟ್ಯ ಮುಂದೆ ಪ್ರತಿ ವರ್ಷ ನಡೆಯಲಿದೆ ಎಂದು ಪ್ರಮುಖ ಪ್ರವಾಸೋದ್ಯಮ ಕಾರ್ಯದರ್ಶಿ ವಲ್ಸ ನಾಯರ್ ಸಿಂಗ್ ಹೇಳಿದ್ದಾರೆ.
ಸಮೃದ್ಧ ಹಸಿರು ಮತ್ತು ಆಕರ್ಷಕ ಕಲ್ಸುಬಾಯಿ ಶಿಖರ ವರ್ಷದಾದ್ಯಂತ ಹಿತಕರ ಹವಾಮಾನ ನೀಡುತ್ತಿದ್ದು, ಇದು 1,646 ಮೀಟರ್ ಅಥವಾ 5400 ಅಡಿ ಎತ್ತರವಿದೆ.
ಇದು ಮಹಾಬಲೇಶ್ವರ (1,353 ಮೀ.), ಪಂಚಗಣಿ (1,293 ಮೀ), ಭೀಮಾಶಂಕರ (1,034 ಮೀ), ಮತ್ತಿತರ ಬೆಟ್ಟಗಳಿಗಿಂತ ಹೆಚ್ಚು ಎತ್ತರದಲ್ಲಿದೆ.
ಈವರೆಗೆ ಇಲ್ಲಿಗೆ ಆಗಮಿಸುತ್ತಿದ್ದ ಸಣ್ಣ ಟ್ರೆಕಿಂಗ್ ಗುಂಪುಗಳು ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ ದಿನದಂದು ಸಣ್ಣ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.