ಅಲಹಾಬಾದ್: ಉತ್ತರಪ್ರದೇಶದ ಅಲಹಾಬಾದ್ನಲ್ಲಿ ತಿಂಗಳು-ಪೂರ್ತಿ ನಡೆಯುವ ಮಾಘ ಮೇಳ ಉತ್ಸವ ಇಂದು ಪ್ರಾರಂಭಗೊಂಡಿದೆ. ಗುರುವಾರ ಪುಷ್ಯ ಪೂರ್ಣಿಮಾ ಸಂದರ್ಭದಲ್ಲಿ ಸುಮಾರು 50 ಲಕ್ಷ ತೀರ್ಥಯಾತ್ರಿಗಳು ಪವಿತ್ರ ನದಿಗಳಾದ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ಈ ಮೂರು ನದಿಗಳ ಸಂಗಮದಲ್ಲಿ ತೀರ್ಥಸ್ನಾನ ಮಾಡಿ ಪುನೀತರಾಗುತ್ತಾರೆ.
ತಿಂಗಳು ಪೂರ್ತಿ ಮಾಘ ಮೇಳದ ಉತ್ಸವದಲ್ಲಿ ಯಾತ್ರಿಗಳು ನದಿ ದಂಡೆಯ ಟೆಂಟುಗಳಲ್ಲಿ ಉಳಿದುಕೊಂಡು ಬೆಳಿಗ್ಗೆ ತೀರ್ಥಸ್ನಾನ ಮಾಡಿ ನಂತರ ಇತರ ಧಾರ್ಮಿಕ ಸಭೆಗಳಲ್ಲಿ ಭಾಗವಹಿಸುತ್ತಾರೆ.
ತೀರ್ಥಸ್ನಾನ ಸುಗಮವಾಗಿ ಸಾಗಲು ವಿಸ್ತಾರವಾದ ವ್ಯವಸ್ಥೆಯನ್ನು ಮಾಡಲಾಗಿದೆ.
ಈಗಾಗಲೇ ಮೂರು ಸಾವಿರಕ್ಕಿಂತಲೂ ಹೆಚ್ಚು ಪೋಲಿಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಟೆಂಟ್ ಸಿಟಿಯಲ್ಲಿ 12 ಪೊಲೀಸ್ ಶಾಖೆಗಳನ್ನು ಸ್ಥಾಪಿಸಲಾಗಿದೆ ಮತ್ತು ಎಲ್ಲಾ ಮುಖ್ಯ ರಸ್ತೆ ಹಾಗೂ ನದಿಗಳ ಸಂಗಮ ಪ್ರದೇಶದಲ್ಲಿ 45 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಇದಲ್ಲದೇ, ಸುರಕ್ಷತಾ ಕ್ರಮವಾಗಿ 160 ಡೈವರ್ಸ್ಗಳ ಸಿಬ್ಬಂದಿಗಳನ್ನು ಹಾಗೂ ಭಯೋತ್ಪಾದಕ ವಿರೋಧಿ ಸ್ಕ್ವಾಡ್ ಮತ್ತು ವಿಶೇಷ ಕಾರ್ಯಪಡೆಯ ತುಕಡಿಗಳನ್ನೂ ನಿಯೋಜಿಸಲಾಗಿದೆ.
ಸಾಂಪ್ರದಾಯಿಕ ಹಿಂದೂ ಕ್ಯಾಲೆಂಡರ್ ಪ್ರಕಾರ ಉತ್ತರ ಭಾರತದಲ್ಲಿ ಮಾಘ ತಿಂಗಳಲ್ಲಿ ನಡೆಯುವ ಈ ಮಾಘ ಮೇಳ ಉತ್ಸವವನ್ನು ಮಿನಿ ಕುಂಭ ಮೇಳ ಎಂದೂ ಕರೆಯಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.