ನವದೆಹಲಿ: ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಚಿತ್ರಿಸಿರುವ ಡೋರ್ಮ್ಯಾಟ್ಗಳನ್ನು ಅಮೇಜಾನ್ ಕೆನಡಾ ತನ್ನ ವೆಚ್ಸೈಟ್ನಿಂದ ತೆಗೆದು ಹಾಕಿದೆ.
ತನ್ನ ವೆಬ್ಸೈಟ್ನಲ್ಲಿ ಈ ಡೋರ್ಮ್ಯಾಟ್ಗಳ ಮಾರಾಟ ಇನ್ನು ಮುಂದೆ ಮಾರಾಟಕ್ಕೆ ಲಭ್ಯವಿರುವುದಿಲ್ಲ ಎಂದು ಅಮೇಜಾನ್ ವಕ್ತಾರ ಹೇಳಿದ್ದಾರೆ.
ಅಮೇಜಾನ್ ಬೇಷರತ್ತಾಗಿ ಕ್ಷಮೆ ಯಾಚಿಸಬೇಕು ಹಾಗೂ ತ್ರಿವರ್ಣ ಧ್ಚಜವನ್ನು ಅವಮಾನಿಸುವ ಎಲ್ಲ ಉತ್ಪನ್ನಗಳನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಅಮೇಜಾನ್ ಅಧಿಕಾರಿಗಳಿಗೆ ಭಾರತದ ವೀಸಾಗಳನ್ನು ನೀಡಲಾಗುವುದಿಲ್ಲ ಎಂದು ಸುಷ್ಮಾ ಸ್ವರಾಜ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
‘ಅಮೇಜಾನ್ ಬೇಷರತ್ತಾಗಿ ಕ್ಷಮೆ ಯಾಚಿಸಬೇಕು. ಅವರು ತಕ್ಷಣವೇ ಭಾರತದ ರಾಷ್ಟ್ರ ಧ್ವಜವನ್ನು ಅವಮಾನಿಸುವ ಉತ್ಪನ್ನಗಳನ್ನು ಹಿಂಪಡೆಯಬೇಕು’ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಈ ಆಕ್ಷೇಪಾರ್ಹ ಉತ್ಪನ್ನಗಳಿಗೆ ಇಬ್ಬರು ಮಾರಾಟಗಾರರಿಂದ ಆಫರ್ ನೀಡಲಾಗಿತ್ತು. ಭಾರತೀಯ ಕಾನೂನು ಪ್ರಕಾರ ಧ್ವಜವನ್ನು ಅವಮಾನಿಸಿದಲ್ಲಿ ದಂಡ ಅಥವಾ ಕಠಿಣ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.