ಮುಂಬೈ: ಮುಂಬೈನ ಹಲವು ಪ್ರದೇಶಗಳಲ್ಲಿ 500 ವೈ-ಫೈ ಹಾಟ್ಸ್ಪಾಟ್ಗಳನ್ನು ಪ್ರಾರಂಭಿಸಿರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೋಮವಾರ ಘೋಷಿಸಿದ್ದಾರೆ.
ಪ್ರಥಮ ಹಂತದ 500 ವೈ-ಫೈ ಹಾಟ್ಸ್ಪಾಟ್ಗಳನ್ನು ಪ್ರಾರಂಭಿಸಲಾಗಿದ್ದು, 2017 ರ ಮೇ 1 ರೊಳಗೆ ಈ ಸಂಖ್ಯೆ 1200 ಕ್ಕೆ ಏರುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ನಾಗರಿಕರಿಗೆ ಉತ್ತಮ ಸೌಲಭ್ಯ ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಜನರಿಗೆ ತಮ್ಮ ಹತ್ತಿರದ ಹಾಟ್ಸ್ಪಾಟ್ ಬಗ್ಗೆ ತಿಳಿಯಲು ಲಿಂಕ್ನ್ನು ಒದಗಿಸಲಾಗಿದೆ. ಮುಂಬೈ ಭಾರತದ ಅತೀ ದೊಡ್ಡ ಸಾರ್ವಜನಿಕ ವೈ-ಫೈ ಸೇವೆ ಮತ್ತು ವಿಶ್ವದ ದೊಡ್ಡ ವೈ-ಫೈಗಳಲ್ಲಿ ಒಂದಾಗಿದೆ ಎಂದು ಫಡ್ನವೀಸ್ ಹೇಳಿದ್ದಾರೆ.
Happy to dedicate Phase 1 of #MumbaiWiFi .
From this instance, 500 WiFi Hotspots go live across various locations in #Mumbai .— Devendra Fadnavis (@Dev_Fadnavis) January 9, 2017
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.