ಬೆಂಗಳೂರು : ವಿದೇಶಗಳಲ್ಲಿ ನೌಕರಿ ಪಡೆಯಲು ಬಯಸುವ ಯುವಕರಿಗಾಗಿ ಶೀಘ್ರದಲ್ಲೇ ಪ್ರವಾಸಿ ಕೌಶಲ ವಿಕಾಸ ಯೋಜನೆಯನ್ನು ಜಾರಿಗೊಳಿಸಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿದೇಶಗಳಲ್ಲಿ ನೌಕರಿ ಬಯಸುವ ಭಾರತೀಯ ಯುವ ಜನರಿಗೆ ಕೇಂದ್ರ ಸರ್ಕಾರವು ಶೀಘ್ರದಲ್ಲಿ ಕೌಶಲ ಅಭಿವೃದ್ಧಿ ಯೋಜನೆಯೊಂದನ್ನು ಜಾರಿಗೊಳಿಸಲಿದೆ. ಪ್ರವಾಸಿ ಕೌಶಲ ವಿಕಾಸ ಯೋಜನಾ ಎಂಬ ಹೆಸರಿನಲ್ಲಿ ಈ ಕೌಶಲ ಅಭಿವೃದ್ಧಿ ಯೋಜನೆ ಜಾರಿಯಾಗಲಿದೆ. ವಿದೇಶಗಳಲ್ಲಿ ನೌಕರಿ ಪಡೆಯಬಯಸುವ ಯುವಕರನ್ನು ಗುರಿಯಾಗಿಟ್ಟುಕೊಂಡು ಈ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಪ್ರವಾಸಿ ಭಾರತೀಯ ದಿವಸ 2017 ರ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ವಿದೇಶದಲ್ಲಿ ಈಗಾಗಲೆ 31 ಮಿಲಿಯನ್ ಭಾರತೀಯರು ಕೆಲಸ ಮಾಡುತ್ತಿದ್ದಾರೆ ಮತ್ತು ವಾಸಿಸುತ್ತಿದ್ದಾರೆ. ವಿದೇಶಗಳಲ್ಲಿ ನೌಕರಿ ಪಡೆಯಲು ಬಯಸುವ ಭಾರತೀಯ ಯುವ ಜನರಿಗಾಗಿ ಪ್ರವಾಸಿ ಕೌಶಲ ವಿಕಾಸ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೊಳಿಸಲಿದ್ದೇವೆ. ಸುಮಾರು 15 ರಿಂದ 30 ದಿನಗಳವರೆಗೆ ತರಬೇತಿ ನೀಡುವ ಯೋಜನೆಯನ್ನು ರೂಪಿಸಲಾಗುವುದು. ಈ ಸಂದರ್ಭ ನೌಕರಿ ಬಯಸಿ ವಿದೇಶಕ್ಕೆ ಹೋಗುವವರಿಗೆ ಅಲ್ಲಿನ ಜನರೊಂದಿಗೆ ಹೇಗೆ ಬೆರೆಯಬೇಕು ? ಅಲ್ಲಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಹೇಗೆ ಕಾಣಬೇಕು, ಅಲ್ಲಿನ ಕಾನೂನಿನ ತಿಳುವಳಿಕೆ ಇವೆಲ್ಲದರ ಬಗ್ಗೆ ಅರಿವು ಮೂಡಿಸುವುದೂ ಈ ಯೋಜನೆಯ ಉದ್ದೇಶವಾಗಲಿದೆ.
ಏಜೆನ್ಸಿಗಳ ಮೂಲಕ ವಿದೇಶಗಳಲ್ಲಿ ಉದ್ಯೋಗ ಪಡೆಯುವ ಹಲವಾರು ಮಂದಿ ವಂಚನೆಗೊಳಗಾಗುತ್ತಿದ್ದಾರೆ. ಅಂಥಹ ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮವನ್ನು ಸರ್ಕಾರ ತೆಗೆದುಕೊಳ್ಳಲಿದೆ.
ಕೆಲವರು ಕಾರಣಾಂತರಗಳಿಂದ ವಿದೇಶಗಳಿಗೆ ಹೋಗಿ ಜೀತದಾಳುಗಳಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಭಾರತೀಯ ಗುರುತಿನ ಚೀಟಿ ನೀಡುವ ಕುರಿತೂ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.