ಮಂಗಳೂರು : ಪ್ರಕೃತಿಯ ಮೇಲೆ ಪ್ರಭುತ್ವ ಸಾಧಿಸಲು ಹೊರಟಿರುವ ಮಾನವನ ಅಹಂಕಾರದ ಪ್ರಯತ್ನದಿಂದಾಗಿ ಘೋರ ಪರಿಣಾಮಗಳಿಗೆ ಕರ್ನಾಟಕ ಕೇರಳ ಗಡಿ ಪ್ರದೇಶದ ಎಂಡೋಸಲ್ಫಾನ್ ದುರಂತವೊಂದು ಜ್ವಲಂತ ಸಾಕ್ಷಿ. ಸರ್ಕಾರದ ಅಕ್ಷಮ್ಯ ನಿರ್ಲಕ್ಶ್ಯ ಮತ್ತು ಬೇಜವಾಬ್ದಾರಿತನದಿಂದಾಗಿ 4 ಜನ ಎಂಡೋಸಲ್ಫಾನ್ ಸಂತ್ರಸ್ತರ ಆತ್ಮಹತ್ಯೆಗೆ ಶರಣಾಗಿರುವುದು ಅತ್ಯಂತ ವಿಷಾದನೀಯ. ಇನ್ನಾದರೂ ಸರ್ಕಾರ ಕಣ್ಣು ತೆರೆಯಬಹುದೆಂದು ಭಾವಿಸುತ್ತೇನೆ. ನಮ್ಮನ್ನಗಲಿದ ಸಂತ್ರಸ್ಥರ ಆತ್ಮಕ್ಕೆ ಚಿರ ಶಾಂತಿಯನ್ನು ಕೋರುತ್ತಾ, ಆ ಕುಟುಂಬಗಳಿಗೆ ಸಂತ್ವಾನ ಹೇಳುತ್ತಾ, ಎಂಡೋಸಲ್ಫಾನ್ ಸಂತ್ರಸ್ಥರಿಗೆ ಹಾಗೂ ಅವರ ಕುಟುಂಬಗಳಿಗೆ ಯುದ್ದೋಪಾಧಿಯಲ್ಲಿ ಅಗತ್ಯ ಸೌಲಭ್ಯಗಳನ್ನು ಮತ್ತು ವೈದ್ಯಕೀಯ ಅವಶ್ಯಕತೆಗಳನ್ನು ಪೂರೈಸುವ ನಾಗರಿಕ ಜವಾಬ್ದಾರಿ ಚುನಾಯಿತ ಸರ್ಕಾರದ ಮೇಲಿದೆ. ರಾಜ್ಯ ಸರ್ಕಾರ ಈ ಕೂಡಲೇ ಕೇರಳ ಸರ್ಕಾರದ ಮಾದರಿಯನ್ನಾದರೂ ಅನುಸರಿಸಿ ಸಂತ್ರಸ್ಥರ ಕುಟುಂಬಗಳ ನಿರ್ವಹಣೆಗಾಗಿ ಮಾಸಿಕ ಸಹಾಯ ಧನವನ್ನು ಬಿಡುಗಡೆ ಮಾಡುವಂತೆ ಹಾಗೂ ಸಂತ್ರಸ್ತರಿಗೆ ವಿಶೇಷ ವೈದ್ಯಕೀಯ ಶುಷ್ರೂಶೆ ನಿರ್ವಹಿಸಲು ಬೇಕಾಗಿರುವ ವಿಶೇಷ ಆಸ್ಪತ್ರೆಯನ್ನು ಸ್ಥಾಪಿಸುವಂತೆ ಎಲ್ಲಾ ಸಂತ್ರಸ್ಥ ಕುಟುಂಬಗಳ ಪರವಾಗಿ ಆಗ್ರಹಿಸುತ್ತೇನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.