ನವದೆಹಲಿ: ಭಾರತ ಯುದ್ಧಕ್ಕೆ ಸಿದ್ಧವಾಗಿದ್ದು, ಪಾಕಿಸ್ಥಾನದ ವಿರುದ್ಧ ಇನ್ನಷ್ಟು ಸರ್ಜಿಕಲ್ ಸ್ಟ್ರೈಕ್ ನಡೆಸುವ ಸಾಧ್ಯತೆ ಇದೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಪಾಕ್ ವಿರುದ್ಧ ಮತ್ತಷ್ಟು ಸೀಮಿತ ದಾಳಿ ನಡೆಸುವ ವಿಚಾರವನ್ನು ತಳ್ಳಿ ಹಾಕುವಂತಿಲ್ಲ. ಈ ಹಿಂದೆ ನಡೆಸಿದ ಸೀಮಿತ ದಾಳಿ ಕೇವಲ ಸಂದೇಶ ಕಳುಹಿಸಲು ನಡೆಸಲಾಗಿತ್ತು ಎಂದು ಹೇಳಿದ್ದಾರೆ.
ಭಾರತೀಯ ಸೇನೆಯ ಕಾರ್ಯಾಚರಣೆ ವ್ಯವಸ್ಥೆಯನ್ನು ಆಧುನೀಕರಣಗೊಳಿಸುವುದು, ಆಧುನಿಕ ಶಸ್ತ್ರಾಸ್ತ್ರಗಳು, ಗೋದಾಮು ಬಳಸುವುದು, ಫಿರಂಗಿಗಳನ್ನು ಗಣಕೀಕರಣ ಮಾಡಬೇಕಿದೆ. ಭಾರತೀಯ ಸೇನೆಯ ನೈತಿಕತೆಯನ್ನು ಹೆಚ್ಚಿಸಿ, ಪ್ರತಿಯೊಬ್ಬ ಯೋಧನೂ ಸೇನೆಯನ್ನು ಬಲಪಡಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಸೈನಿಕರು ಗಡಿಯನ್ನು ಸುಭದ್ರವಾಗಿ ರಕ್ಷಿಸಲು ಶಸ್ತ್ರಾಸ್ತ್ರಗಳು, ಉಪಕರಣಗಳನ್ನು ಆಧುನೀಕರಣಗೊಳಿಸುವುದು ಎರಡನೇ ಪ್ರಮುಖ ಆದತ್ಯೆಯಾಗಿದೆ ಎಂದು ಬಿಪಿನ್ ರಾವತ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ಸೇನಾ ಮುಖ್ಯಸ್ಥರಾಗಿ ಆಯ್ಕೆಯಾದ ರಾವತ್ ಅವರು ಈ ಹಿಂದೆ ಗಡಿಯಲ್ಲಿ ಶಾಂತಿ ಸ್ಥಾಪಿಸುವುದು ಸೇನೆಯ ಪ್ರಮುಖ ಪಾತ್ರವಾಗಿದೆ. ಆದರೆ ಅಗತ್ಯ ಸಂದರ್ಭಗಳಲ್ಲಿ ಹಿಂಜರಿಯದೇ ಭುಜ ಸಡಿಲಿಸಿ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧವಿದೆ ಎಂದು ಹೇಳಿದ್ದರು.
ಒಆರ್ಒಪಿ ಕುರಿತು ಮಾತನಾಡಿದ ಬಿಪಿನ್ ರಾವತ್, ಕೇಂದ್ರ ಸರ್ಕಾರ ಈಗಾಗಲೇ ಕೆಲವು ಬೇಡಿಕೆಗಳನ್ನು ಪೂರೈಸಿದೆ. ಉಳಿದ ಬೇಡಿಕೆಗಳನ್ನು ಪೂರೈಸುವ ಭರವಸೆ ಇದ್ದು, ಜಂತರ್ ಮಂತರ್ನಲ್ಲಿ ಕುಳಿತಿರುವ ಮಾಜಿ ಸೇನಾಧಿಕಾರಿಗಳು ಆತಂಕಕ್ಕೀಡಾಗದೇ ಮನೆಗೆ ಹಿಂದಿರುಗಬಹುದು ಎಂದು ಹೇಳಿದ್ದಾರೆ.
ಬಿಪಿನ್ ರಾವತ್ ಅವರು ಡಿಸೆಂಬರ್ 27ರಂದು ಭಾರತೀಯ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.