ಸಿಲಿಗುರಿ: ಸಿಲಿಗುರಿಯ ಸ್ವಯಂಸೇವಾ ಸಂಸ್ಥೆ ನಾಗರಿಕ್ ಜಾಗರೂಕತಾ ಮಂಚ್ ಇತ್ತೀಚೆಗೆ ‘ವಾಕ್ ಫಾರ್ ಹೆಲ್ತ್’ ಜಾಗೃತಿ ಅಭಿಯಾನವನ್ನು ಆಯೋಜಿಸಿದೆ.
ಪ್ರತಿನಿತ್ಯ ನಡೆಯುವ (ವಾಕಿಂಗ್) ಮಾಡುವ ಮೂಲಕ ಆರೋಗ್ಯವಂತರಾಗಿ, ಫಿಟ್ ಆಗಿ ಇರುವ ಗುರಿಯೊಂದಿಗೆ ಈ ಅಭಿಯಾನವನ್ನು ಆಯೋಜಿಸಲಾಗಿತ್ತು. ಹಲವಾರು ಮಂದಿ ಈ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಇತ್ತೀಚಿನ ದಿನಗಳಲ್ಲಿ ಜನರು ಅತ್ಯಂತ ಕಡಿಮೆ ದೂರವನ್ನು ಕ್ರಮಿಸಲು ಕೂಡ ವಾಹನಗಳನ್ನು ಬಳಸಿ, ನಡೆಯುವುದನ್ನು ಮರೆಯುತ್ತಿದ್ದಾರೆ. ವರ್ಷದ ಆರಂಭದಲ್ಲೇ ಉತ್ತಮ ಆರೋಗ್ಯ ನೀಡಬಹುದಾದ ವಾಕಿಂಗ್ನ್ನು ಉತ್ತೇಜಿಸಲು ಈ ಅಭಿಯಾನ ನಡೆಸಲಾಗಿದೆ. ಇದು ಮಾಲಿನ್ಯವನ್ನೂ ತಗ್ಗಿಸಲಿದೆ ಎಂದು ನಾಗರಿಕ್ ಜಾಗರೂಕತಾ ಮಂಚ್ ಕಾರ್ಯದರ್ಶಿ ಬಿಕ್ರಂ ಗುಪ್ತಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.