×
Home About Us Advertise With s Contact Us

ಆರ್‌ಬಿಐದಿಂದ ಸಾಲ ಮರುಪಾವತಿ ಅವಧಿ 90 ದಿನಗಳಿಗೆ ವಿಸ್ತರಣೆ

rbi
ನವದೆಹಲಿ: ಕೇಂದ್ರ ಸರ್ಕಾರದ ನೋಟು ನಿಷೇಧದ ಬಳಿಕ ನಗದು ಅಭಾವ ಎದುರಾಗಿದ್ದು, ನ.1ರಿಂದ ಡಿ.31ರ ವರೆಗಿನ ಅವಧಿಯಲ್ಲಿ ಸಾಲ ಮರುಪಾವತಿ ಮಾಡಬೇಕಿರುವ ಗ್ರಾಹಕರ ಸಾಲ ಮರುಪಾವತಿ ಅವಧಿಯನ್ನು 90 ದಿನಗಳ ವರೆಗೆ ವಿಸ್ತರಿಸಲಾಗಿದೆ.

ಅಲ್ಲದೇ ನ.1ರಿಂದ ಡಿ.31ರ ವರೆಗೆ 1 ಕೋಟಿ ಅಥವಾ ಅದಕ್ಕಿಂತ ಕಡಿಮೆ ಸಾಲ ಪಡೆದ ವ್ಯಾಪಾರಸ್ಥರು, ದೀರ್ಘಾವಧಿ ಸಾಲ ಪಡೆದ ವೈಯಕ್ತಿಕ ವಿಭಾಗದ ಸಾಲಗಾರರು, ಮೈಕ್ರೋ ಫೈನಾನ್ಸ್ ಕಂಪೆನಿಗಳಿಗೆ ಈ ನಿಯಮ ಅನ್ವಯವಾಗಲಿದೆ ಎಂದು ಆರ್‌ಬಿಐ ಅಧಿಕೃತವಾಗಿ ತಿಳಿಸಿದೆ.

ಗೃಹ ಸಾಲ, ಕೃಷಿ ಸಾಲ ಪಡೆದವರಿಗೂ ಇದು ಅನ್ವಯವಾಗಲಿದೆ. ಎಲ್ಲ ಹಣಕಾಸು ಸಂಸ್ಥೆಗಳ ಈ ನಿಯಮ ಪಾಲಿಸಬೇಕು ಎಂದು ಆರ್‌ಬಿಐ ಸೂಚಿಸಿದೆ.

 

Recent News

Back To Top
error: Content is protected !!