ವಾರಣಾಸಿ: ನಾನು ಸಂಸತ್ನಲ್ಲಿ ಮಾತನಾಡಿದರೆ ಭೂಕಂಪವಾಗಬಹುದು ಎಂಬ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಪ್ರಧಾನಿ ಮೋದಿ ಅವರು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೊನೆಗೂ ಮಾತನಾಡಲು ಆರಂಭಿಸಿದ್ದಾರೆ. ಯುವ ನಾಯಕ ಹೇಗೆ ಮಾತನಾಡಬೇಕು ಎಂದು ಕಲಿಯಲು ಆರಂಭಿಸಿದ್ದಾರೆ. 2009ರಲ್ಲಿ ಈ ಪೊಟ್ಟಣದೊಳಗೆ ಏನಿದೆ ಎಂದು ತಿಳಿಯಲು ಸಾಧ್ಯವಾಗುತ್ತಿರಲಿಲ್ಲ. ಅವರು ಮಾತನಾಡಲು ಆರಂಭಿಸಿದ್ದು ಸಂತೋಷವಿದೆ. ಈಗ ನಾವು ಆ ‘ಭೂಕಂಪ’ ಎಂದರೇನು ಎಂದು ಕಂಡಿದ್ದೇವೆ. ಈಗ ಯಾವುದೇ ‘ಭೂಕಂಪ’ವಾಗುವ ಭಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ವಾತಣಾಸಿಯಲ್ಲಿ ಮಹಾಮನಾ ಪಂ. ಮದನ್ ಮೋಹನ್ ಮಾಳವಿಯಾ ಕ್ಯಾನ್ಸರ್ ಕೇಂದ್ರ ಉದ್ಘಾಟನೆಗೂ ಮುನ್ನ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ರಾಹುಲ್ ಗಾಂಧಿ ಅವರು ಮಾತನಾಡದೇ ಇದ್ದಿದ್ದರೆ ಈ ದೇಶ ದೊಡ್ಡ ಭೂಕಂಪವನ್ನು ಎದುರಿಸಬೇಕಿತ್ತು. ಜನರು ಸಹಿಸುತ್ತಿರಲಿಲ್ಲ. ಅಲ್ಲದೇ ಮುಂದಿನ 10 ವರ್ಷಗಳ ಕಾಲ ದೇಶ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ದೇಶದ ಬಹುಪಾಲು ಮಂದಿ ಶಿಕ್ಷಣ ವಂಚಿತರಾಗಿದ್ದಾರೆ. ದೇಶದ ಶೇ.50ರಷ್ಟು ಗ್ರಾಮಗಳಲ್ಲಿ ವಿದ್ಯುತ್ ಇಲ್ಲದಿದ್ದಾಗ ನಗದು ರಹಿತ ಆರ್ಥಿಕತೆ ಜಾರಿಗೊಳಿಸಲು ಹೇಗೆ ಸಾಧ್ಯ ಎಂದು ಕಾಂಗ್ರೆಸ್ ಪ್ರಶ್ನಿಸುತ್ತಿದೆ. ಅವರು ಯಾವ ವರದಿಯ ಆಧಾರದ ಮೇಲೆ ಇದನ್ನು ಹೇಳುತ್ತಿದ್ದಾರೆ. ಅವರು ತಮ್ಮದೇ ವರದಿಯನ್ನು ಹೇಳುತ್ತಿದ್ದಾರೆಯೇ ಅಥವಾ ಎನ್ಡಿಎ ಸರ್ಕಾರದ ಬಗ್ಗೆ ಹೇಳುತ್ತಿದ್ದಾರೆ ಎಂದು ನನಗೆ ತಿಳಿಯಬೇಕಿದೆ ಎಂದು ಮೋದಿ ಮರು ಪ್ರಶ್ನಿಸಿದ್ದಾರೆ.
ದೇಶದ ಯುವಕರು ಆನ್ಲೈನ್ ಬ್ಯಾಂಕಿಂಗ್ನತ್ತ ಸರಿಇಯಬೇಕು. ನಿಮ್ಮ ಮೊಬೈಲ್ಗಳೇ ನಿಮ್ಮ ಬ್ಯಾಂಕ್ಗಳು, ವ್ಯಾಲೆಟ್ಗಳಾಗಬಹುದು ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ವಿಷಯವನ್ನು ಪ್ರಸ್ತಾಪಿಸಿದ ಪ್ರಧಾನಿಯವರು, ‘ನಮ್ಮ ಸೇನೆಯೇ ದೇಶದ ಹೆಮ್ಮೆ, ಆದರೆ ಕೆಲವು ಮಂದಿ ಅವರ ಶೌಉದ ಬಗ್ಗೆ ಸಂಶಯಪಡುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ವಾರಣಾಸಿಯಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.