ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿಯ ಎರಡು ದಿನಗಳ ಸಭೆ ಇಂದಿನಿಂದ ದೆಹಲಿಯಲ್ಲಿ ಆರಂಭವಾಗಲಿದ್ದು, ಹೊಸ ಪರೋಕ್ಷ ತೆರಿಗೆ ಅಡಿಯಲ್ಲಿ ಬರುವ ನಿರ್ಣಯಗಳ ಕಾನೂನು ಮಾದರಿ ರಚನೆ ವಿಷಯವಾಗಿ ಚರ್ಚೆ ನಡೆಯಲಿದೆ.
ಇದು ಜಿಎಸ್ಟಿ ಮಂಡಳಿಯ ಏಳನೇ ಸಭೆಯಾಗಿದ್ದು, ಹಣಕಾಸು ಸಚಿವ ಅರುಣ್ ಜೇಟ್ಲಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.
ಕಳೆದ ಬಾರಿಯ ಸಭೆಯಲ್ಲಿ ಜಿಎಸ್ಟಿ ಕಾನೂನು ಮಾದರಿಯ 20 ಅಧ್ಯಾಯಗಳನ್ನು ಪೂರ್ಣಗೊಳಿಸಿದ್ದು, ಉಳಿದ 7 ಅಧ್ಯಾಯಗಳನ್ನು ಇಂದು ಪೂರ್ಣಗೊಳಿಸುವ ಸಾಧ್ಯತೆ ಇದೆ.
ಈ ಹಿಂದೆ ಮಂಡಳಿ ಹಲವು ನಿರ್ಣಯಗಳನ್ನು ಕೈಗೊಂಡಿದ್ದು, ಸಾಮಾನ್ಯ ರಾಜ್ಯಗಳ 20 ಲಕ್ಷ ರೂ. ವರೆಗಿನ ತೆರಿಗೆ ವಿನಾಯಿತಿ ಹಾಗೂ ವಿಶೇಷ ವರ್ಗದ ರಾಜ್ಯಗಳ 10 ಲಕ್ಷ ರೂ. ವರೆಗಿನ ತೆರಿಗೆ ವಿನಾಯಿತಿ ನಿರ್ಧಾರವನ್ನೂ ಕೈಗೊಳ್ಳಲಾಗಿದೆ.
ಜಿಎಸ್ಟಿ ಜಾರಿಗೆ ತರುವುದರಿಂದ ರಾಜ್ಯಗಳಿಗೆ ಮುಂದಿನ 5 ವರ್ಷಗಳ ವರೆಗಿನ ಆದಾಯ ನಷ್ಟದ ಪರಿಹಾರ ನೀಡಲು ನಿರ್ಧರಿಸಲಾಗಿದ್ದು, ಸ್ಥಿರ ಬೆಳವಣಿಗೆ ದರವನ್ನು ಶೇ.14ಕ್ಕೆ ನಿಗದಿಪಡಿಸಲಾಗಿದೆ.
ಜಿಎಸ್ಟಿ ಕಾಯಿದೆ ಜಾರಿಗೆ ತರಲು ಸಂವಿಧಾನ ತಿದ್ದುಪಡಿ ಮಸೂದೆಗೆ ಸಂಸತ್ನ ಎರಡೂ ಸದನಗಳಲ್ಲಿ ಅನುಮೋದನೆ ಪಡೆಯಲಾಗಿದ್ದು, ಕೇಂದ್ರ ಸರ್ಕಾರ ಸೆಪ್ಟೆಂಬರ್ 2016ರ ಒಳಗಾಗಿ ಜಿಎಸ್ಟಿ ಕಾಯಿದೆ ಜಾರಿಗೆ ತರಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.