ನವದೆಹಲಿ: ಭೂಗತ ಪಾತಕಿ, ಭಾರತಕ್ಕೆ ಅಗತ್ಯವಾಗಿ ಬೇಕಾದ ಭಯೋತ್ಪಾದಕ ದಾವೂದ್ ಇಬ್ರಾಹಿಂ ಒಂದು ಕಾಲದಲ್ಲಿ ಶರಣಾಗತನಾಗಲು ಬಯಸಿದ್ದ ಎಂದು ಸಿಬಿಐನ ಮಾಜಿ ಡಿಐಜಿ ನೀರಜ್ ಕುಮಾರ್ ಹೇಳಿದ್ದಾರೆ.
ಜೂನ್ 1994ರಲ್ಲಿ ದಾವೂದ್ ಬಳಿ ತಾನು ಮೂರು ಬಾರಿ ಮಾತನಾಡಿದ್ದೇನೆ, ಆವಾಗ ಅವನು ಶರಣಾಗತನಾಗುವ ಇಂಗಿತ ವ್ಯಕ್ತಪಡಿಸಿದ್ದ ಎಂದು ನೀರಜ್ ತಮ್ಮ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.
ದಾವೂದ್ ಸುರಕ್ಷತೆಯ ಬಗ್ಗೆ ಸಿಬಿಐ ಗ್ಯಾಂರಂಟಿ ಕೊಡಲು ಸಾಧ್ಯವಿಲ್ಲದ ಕಾರಣ ಆತನ ಆಫರ್ನ್ನು ತನಿಖಾ ಸಂಸ್ಥೆ ನಿರಾಕರಿಸಿತು ಎಂದು ಅವರು ಹೇಳಿದ್ದಾರೆ.
ಖ್ಯಾತ ವಕೀಲ ರಾಂ ಜೇಠ್ಮಲಾನಿ ಕೂಡ ದಾವೂದ್ ತನಗೆ ಕರೆ ಮಾಡಿ ಶರಣಾಗುವ ಇಂಗಿತ ವ್ಯಕ್ತಪಡಿಸಿದ್ದ ಎಂದು ಹೇಳಿಕೊಂಡಿದ್ದಾರೆ.
ಆದರೆ ಮಾಜಿ ಸಿಬಿಐ ಮುಖ್ಯಸ್ಥ ವಿಜಯ್ ರಾಮ ರಾವ್ ಈ ಹೇಳಿಕೆಯನ್ನು ನಿರಾಕರಿಸಿದ್ದು, ದಾವೂದ್ ಎಂದೂ ಶರಣಾಗುವ ಆಫರ್ ನೀಡಿರಲಿಲ್ಲ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ದಾವೂದ್ ವಿಷಯದಲ್ಲಿ ಮಾಜಿ ಅಧಿಕಾರಿಗಳು ಗೊಂದಲಮಯ ಹೇಳಿಕೆ ನೀಡಿದ್ದಾರೆ. ಇದರಲ್ಲಿ ಎಷ್ಟು ನಿಜಾಂಶವಿದೆ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.