ಚಂಡೀಗಢ: ಚಂಡೀಗಢದಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಮತ್ತು ಶಿರೋಮನಿ ಅಕಾಲಿದಳ್ ಸೇರಿ 26 ಸ್ಥಾನಗಳ ಪೈಕಿ 21 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿ ಸಂಭ್ರಮಾಚರಣೆ ಆಚರಿಸಿತು.
ಬಿಜೆಪಿ ಆಡಳಿತ ಇರುವ ಪಂಜಾಬ್ನಲ್ಲಿ ಒಟ್ಟು 26 ನಗರ ವಿಭಾಗಗಳ ಪೈಕಿ ಬಿಜೆಪಿ ಹಾಗೂ ಶಿರೋಮನಿ ಅಕಾಲಿದಳ್ ಮೈತ್ರಿಯಾಗಿ 21 ಸ್ಥಾನಗಳನ್ನು ಗೆದ್ದಿವೆ ಎಂದು ವರದಿಯಾಗಿದೆ. ಕಾಂಗ್ರೆಸ್ ಕೇವಲ ನಾಲ್ಕು ಸ್ಥಾನಗಳಿಗೆ ತೃಪ್ತಿಗೊಂಡಿದೆ ಹಾಗೂ ಒಂದು ಸ್ಥಾನ ಸ್ವತಂತ್ರ ಪಕ್ಷದ ಪಾಲಾಗಿದೆ.
ಬಿಜೆಪಿ ಸಂಸದೆ ಕಿರಣ್ ಖೇರ್ ಈ ಅದ್ಭುತ ವಿಜಯ ಸಾಧಿಸಲು ಕಾರಣರಾದ ಚಂಡೀಗಢದ ನಾಗರಿಕರಿಗೆ ಧನ್ಯವಾದ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರು ಘೋಷಿಸಿದ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅನಾಣ್ಯೀಕರಣದ ನಂತರ ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ ಮತ್ತು ಮಹಾರಾಷ್ಟ್ರಗಳಲ್ಲಿ ನಡೆದ ಇತ್ತೀಚಿನ ಚುಣಾವಣೆಗಳಲ್ಲಿ ಮತದಾರರು ಬಿಜೆಪಿಗೆ ಮತ ನೀಡಿ ಗೆಲ್ಲಿಸಿದ್ದಾರೆ. ಈ ಅಂಶಗಳಿಂದ ಜನ ಸಾಮಾನ್ಯರು ಪ್ರಧಾನ ಮಂತ್ರಿ ಮೋದಿ ಅವರ ಮೇಲೆ ವಿಶ್ವಾಸವಿನ್ನೂ ಗಟ್ಟಿಯಾಗಿದೆ ಎಂದು ತಿಳಿಯಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.