ಪಂಜಾಬ್ : ಭಾರತದ ಪಾಲಿನ ನೀರನ್ನು ಪಾಕಿಸ್ಥಾನಕ್ಕೆ ಹರಿ ಬಿಡಲು ಸಾಧ್ಯವಿಲ್ಲ. ನಮ್ಮ ರೈತರ ಜಮೀನಿಗೆ ಸಾಕಷ್ಟು ನೀರು ಬೇಕು. ರೈತರಿಗೆ ಸಾಕಷ್ಟು ನೀರು ಒದಗಿಸಲು ನಮ್ಮ ಸರ್ಕಾರ ಎಲ್ಲ ಪ್ರಯತ್ನಗಳನ್ನೂ ಮಾಡಲಿದೆ. ಪಂಜಾಬ್ನ ರೈತರ ನೀರಿನ ಹಕ್ಕನ್ನು ಪಾಲಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು.
ಶುಕ್ರವಾರ ಪಂಜಾಬ್ನ ಭತಿಂಡಾ ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಲಿರುವ ಏಮ್ಸ್ಗೆ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದ ಮೋದಿಯವರು, ಸಿಂಧು ನದಿ ನೀರು ಹಂಚಿಕೆ ಕುರಿತು ಮಾತನಾಡುತ್ತಾ, ನಮ್ಮ ರೈತರ ನೀರಿನ ಹಕ್ಕನ್ನು ಪಾಲಿಸಲಾಗುವುದು. ಯಾವುದೇ ಕಾರಣಕ್ಕೂ ಭಾರತದ ಪಾಲಿನ ನೀರನ್ನು ಪಾಕಿಸ್ಥಾನಕ್ಕೆ ಹರಿ ಬಿಡಲು ಸಾಧ್ಯವಿಲ್ಲ. ನಾನು ಕೇವಲ ರೈತರ ಕಲ್ಯಾಣಕ್ಕಾಗಿ ಚಿಂತಿಸುತ್ತೇನೆ. ನನಗೆ ಚುನಾವಣೆಯ ಯಾವುದೇ ಭಯವಿಲ್ಲ ಎಂದಿದ್ದಾರೆ.
ದೇಶದ ಅಭಿವೃದ್ಧಿಗೆ ಸಾಮಾಜಿಕ ಮೂಲಸೌಕರ್ಯಗಳ ಅವಶ್ಯಕತೆಯಿದೆ, ಹಾಗೂ ಉತ್ತಮ ಗುಣಮಟ್ಟದ ಶಾಲೆ ಮತ್ತು ಆಸ್ಪತ್ರೆಗಳ ಅಗತ್ಯವಿದೆ. ಪಂಜಾಬ್ನ ಸ್ಥಳೀಯ ಪ್ರದೇಶಗಳಿಗೆ ಏಮ್ಸ್ ಸಹಕಾರಿಯಾಗಲಿದೆ. ನಮ್ಮ ಸರ್ಕಾರ ಕೇವಲ ಅಡಿಪಾಯ ಇಟ್ಟು ಕೆಲಸ ಮುಗಿಸುವುದಿಲ್ಲ ಬದಲಾಗಿ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲಿವೆ. ನಮ್ಮ ಸರ್ಕಾರದ ಆದ್ಯತೆಯು ಎಲ್ಲ ಯೋಜನೆಗಳನ್ನು ನಿಶ್ಚಿತ ಸಮಯದಲ್ಲಿ ಅಥವಾ ಅದರ ಮೊದಲೇ ಸಂಪೂರ್ಣಗೊಳಿಸುತ್ತದೆ.
ಪೇಶಾವರದ ಶಾಲೆಯ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಪ್ರತೀ ಭಾರತೀಯನು ಬೇಸರಗೊಂಡಿದ್ದ. ಪಾಕಿಸ್ಥಾನಕ್ಕೆ ಈಗ ಭಾರತೀಯ ಸೇನೆಯ ಸಾಮರ್ಥ್ಯದ ಅರಿವಾಗಿದೆ. ಸಿಮೀತ ದಾಳಿಯು ಪಾಕಿಸ್ಥಾನವನ್ನು ಬೆಚ್ಚಿಬಿಳಿಸಿದೆ, ಆ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಇಷ್ಟಾದರೂ ಪಾಕಿಸ್ಥಾನ ಯುದ್ಧ ಮಾಡಲು ಉತ್ಸಾಹ ತೋರುತ್ತಿದೆ. ಅಲ್ಲಿನ ಜನರಿಗೆ ಪಾಕ್ ಸರ್ಕಾರದ ಕಾರ್ಯ ವೈಖರಿ ಬಗ್ಗೆ ಬೇಸರ ಬಂದಿದೆ ಎಂದರು.
ಕಪ್ಪು ಹಣ ಮತ್ತು ಭ್ರಷ್ಟಾಚಾರ ಮಧ್ಯಮ ವರ್ಗದ ಜನರನ್ನು ಲೂಟಿ ಮಾಡಿವೆ ಹಾಗೂ ಬಡಜನರನ್ನು ಅವರ ಹಕ್ಕುಗಳಿಂದ ವಂಚಿತ ಮಾಡಿವೆ. ಮಧ್ಯಮ ವರ್ಗದವರ ದುರ್ಬಳಕೆ ಆಗಬಾರದು ಹಾಗೂ ಬಡವರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ನಾನು ಸಾಧ್ಯವಾಗುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ.
ನೋಟು ನಿಷೇಧದ ಬಳಿಕ ಜನರು ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಯಿತು, ಆ ಸಮಯದಲ್ಲೂ ನನ್ನ ಬೆಂಬಲವಾಗಿ ನಿಂತಿದ್ದಕ್ಕೆ ಧನ್ಯವಾದ ಹೇಳಲು ನನ್ನ ಪದಗಳು ಸಣ್ಣದಾಗುತ್ತವೆ. ನಿಮ್ಮ ಮೊಬೈಲ್ ಫೋನ್ ಕೂಡಾ ಒಂದು ಬ್ಯಾಂಕ್ ಆಗಿದೆ. ವಸ್ತುಗಳನ್ನು ಖರೀದಿಸಲು ಹಾಗೂ ಬಿಲ್ ಪಾವತಿಸಲು ನೀವು ಅದನ್ನು ಉಪಯೋಗಿಸಬಹುದು ಎಂದರು.
ಪ್ರಕಾಶ್ ಸಿಂಗ್ ಬಾದಲ್ ಅವರನ್ನು ನಾಯಕರಾಗಿ ಹೊಂದಿರುವ ಪಂಜಾಬ್ ಅದೃಷ್ಟ ಮಾಡಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.