ನವದೆಹಲಿ: 2017-18ನೇ ಸಾಲಿನ ಹಣಕಾಸು ವರ್ಷದ ಕೇಂದ್ರ ಬಜೆಟ್ನ್ನು ಒಂದು ತಿಂಗಳು ಮುಂಚಿತವಾಗಿ ನಡೆಯಲಿದ್ದು, ಬಜೆಟ್ ಫೆಬ್ರವರಿ 1ರಂದು ಆರಂಭಗೊಳ್ಳಲಿದೆ.
ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಫೆ.೧ರಂದು ಬಜೆಟ್ ಮಂಡಿಸಲಿದ್ದಾರೆ. ಹಣಕಾಸು ಸಚಿವಾಲಯ 2017ರ ಬಜೆಟ್ನ್ನು ಫೆಬ್ರವರಿ 1ಕ್ಕೆ ಹಿಂದೂಡಲು ಪ್ರಸ್ತಾಪಿಸಿತ್ತು. ಎಪ್ರಿಲ್ 1ರ ಮುಂದಿನ ಹಣಕಾಸು ವರ್ಷದ ಆರಂಭಕ್ಕೂ ಮುನ್ನ ವಾರ್ಷಿಕ ಖರ್ಚು- ವೆಚ್ಚ, ತೆರಿಗೆ ಪ್ರಸ್ತಾಪ ಅನುಮೋದನೆಗೆ ಶಾಸನ ರಚನೆಗೆ ಅನುಕೂಲವಾಗುವಂತೆ ಇದನ್ನು ಮುಂಚಿತವಾಗಿ ಆರಂಭಿಸಲು ನಿರ್ಧರಿಸಲಾಗಿದೆ.
ಬಜೆಟ್ ಮಂಡನೆಗೆ ಫೆ.1ರ ದಿನಾಂಕ ಘೋಷಿಸಿ ಬಜೆಟ್ ಪ್ರಕ್ರಿಯೆಯನ್ನು ಮಾರ್ಚ್ 24ರ ಒಳಗೆ ಅಂತ್ಯಗೊಳಿಸಲು ಹಣಕಾಸು ಸಚಿವಾಲಯ ಪ್ರಸ್ತಾಪಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.