ಫೈಜಾಬಾದ್ : ಅಯೋಧ್ಯೆ ರಾಮಮಂದಿರ ನಿರ್ಮಾಣ ವಿವಾದವನ್ನು ಬಗೆಹರಿಸಲು ಹೊಸ ಪ್ರಸ್ತಾವನೆಗೆ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಸಹಿ ಹಾಕುವ ಮೂಲಕ ಫೈಜಾಬಾದ್ ವಿಭಾಗೀಯ ಆಯುಕ್ತರಿಗೆ ನೀಡಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿವಾದ ಬಗೆಹರಿಯಬೇಕಾದರೆ ಮಸೀದಿ ಹಾಗೂ ರಾಮಮಂದಿರ ಎರಡೂ ನಿರ್ಮಾಣವಾಗಬೇಕು. ಇದೇ ಹೊಸ ಪ್ರಸ್ತಾವನೆಯಾಗಿದ್ದು, ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಪಲೋಕ್ ಬಸು ನೇತೃತ್ವದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಿ ಸುಮಾರು 10,000 ಕ್ಕೂ ಹೆಚ್ಚು ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಹೊಸ ಪ್ರಸ್ತಾವನೆಗೆ ಸಹಿ ಹಾಕಿದ್ದಾರೆ. ಮಸೀದಿ ಮತ್ತು ರಾಮಮಂದಿರ ನಿರ್ಮಾಣ ಮಾಡುವುದರ ಪರವಾಗಿ ಇವರೆಲ್ಲರೂ ಅರ್ಜಿಗೆ ಸಹಿ ಹಾಕಿದ್ದಾರೆ.
ಸಹಿ ಸಂಗ್ರಹದ ಹೊಸ ಪ್ರಸ್ತಾವನೆಯನ್ನು ಫೈಜಾಬಾದ್ ವಿಭಾಗೀಯ ಆಯುಕ್ತರಾದ ಸೂರ್ಯ ಪ್ರಕಾಶ್ ಮಿಶ್ರಾ ಅವರಿಗೆ ಸೋಮವಾರದಂದು ನೀಡಲಾಗಿದೆ. ಅರ್ಜಿಯನ್ನು ಸ್ವೀಕರಿಸಿ ಮಾತನಾಡಿದ ಮಿಶ್ರಾ ಅವರು, ‘ರಾಮಂದಿರ ಮತ್ತು ಮಸೀದಿ ನಿರ್ಮಾಣ ಮಾಡುವ ಕುರಿತು ಸಹಿ ಸಂಗ್ರಹವಿರುವ ಅರ್ಜಿಯನ್ನು ಸ್ವೀಕರಿಸಲಾಗಿದೆ. ಆದರೆ ಅಂತಿಮ ನಿರ್ಧಾರವನ್ನು ಇನ್ನಷ್ಟೇ ತೆಗೆದುಕೊಳ್ಳಬೇಕು’ ಎಂದಿದ್ದಾರೆ.
ಸಹಿ ಸಂಗ್ರಹ ಅಭಿಯಾನದ ನೇತೃತ್ವ ವಹಿಸಿದ್ದ ನಿವೃತ್ತ ನ್ಯಾಯಮೂರ್ತಿ ಪಲೋಕ್ ಬಸು ಅವರು, ಈ ಹೊಸ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್ ಗಣನೆಗೆ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸ ನಮಗಿದೆ. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ವಿವಾದ ಬಗೆಹರಿಯಲಿದೆ ಎಂಬ ನಂಬಿಕೆ ನಮಗಿದೆ ಎಂದಿದ್ದಾರೆ.
ಆದರೆ ಈ ಹೊಸ ಪ್ರಸ್ತಾವನೆಯನ್ನು ವಿಶ್ವ ಹಿಂದು ಪರಿಷತ್ ತಿರಸ್ಕರಿಸಿದ್ದು, ಇದು ಹೈಕೋರ್ಟ್ಗೆ ಅವಮಾನಿಸಿದಂತೆ ಎಂದು ಹೇಳಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.