ಬೆಂಗಳೂರು : 500 ಮತ್ತು 1000 ರೂ.ಗಳ ನೋಟುಗಳನ್ನು ನಿಷೇಧಿಸುವ ಮೂಲಕ ಅರ್ಥಕ್ರಾಂತಿಗೆ ನಾಂದಿ ಹಾಡಿದ ಭಾರತ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಸರ್ಕಾರದ ಮಾಜಿ ಹೆಚ್ಚುವರಿ ಕಾರ್ಯದರ್ಶಿ, ನಿವೃತ್ತ ಐ.ಎ.ಎಸ್. ಅಧಿಕಾರಿಯಾಗಿರುವ ಮದನ್ಗೋಪಾಲ್ ಅವರು ಶ್ಲಾಘಿಸಿದ್ದಾರೆ.
ಸರ್ಕಾರದ ನಿರ್ಧಾರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು ನಮ್ಮಲ್ಲಿ ಕಪ್ಪು ಹಣವಿಲ್ಲ, ಕಪ್ಪು ಆರ್ಥಿಕತೆ ಇದೆ. ಭಾರತದ ಎಲ್ಲಾ ವರ್ಗಗಳ ಜನರು ನಗದನ್ನೇ ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಜನರ ಈ ಹವ್ಯಾಸವನ್ನು ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು, ವೃತ್ತಿಪರರು ಎನಿಸಿಕೊಂಡ ಕೆಲ ವಕೀಲರು, ವೈದ್ಯರುಗಳು, ಶಿಕ್ಷಣ ಸಂಸ್ಥೆಗಳು, ಪತ್ರಕರ್ತರು, ರಿಯಲ್ ಎಸ್ಟೇಟ್ನವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇವರಿಂದಾಗಿ ಪ್ರಾಮಾಣಿಕವಾಗಿ ಹಣ ಸಂಪಾದಿಸಿದವರು ಕೂಡಾ ನಗದಿನ ರೂಪದಲ್ಲೇ ವಹಿವಾಟು ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಈ ರೀತಿಯಾಗಿ ಅಡ್ಡ ಮಾರ್ಗದಲ್ಲಿ ಸಾಗುತ್ತಿರುವ ಆರ್ಥಿಕತೆಯಿಂದ ನಮ್ಮ ನಿತ್ಯದ ಆರ್ಥಿಕ ಪ್ರಗತಿಯ ಮೇಲೆ ದೊಡ್ಡ ಹೊಡೆತ ಬೀಳುತ್ತಿದೆ.
ಭಾರತ ದ್ವೇಷಿಗಳು ಕಪ್ಪು ಹಣವನ್ನು ಬಳಸಿಕೊಂಡು ಉಗ್ರರನ್ನು, ಮುಸ್ಲಿಂ ಭೂತವಾದಿಗಳನ್ನು ನಕಲಿ ನೋಟುಗಳನ್ನು ಭಾರತದೊಳಗೆ ಬೆಳೆಯುವಂತೆ ಮಾಡುತ್ತಿದ್ದಾರೆ.
ಪ್ರೊಫೆಸರ್ ಅರುಣ್ ಕುಮಾರ್ ಅವರು ಬರೆದ ‘ಬ್ಲಾಕ್ ಎಕಾನಮಿ ಇನ್ ಇಂಡಿಯಾ’ ಎಂಬ ಪುಸ್ತಕವನ್ನು ಓದಿದರೆ ರೂ. ೫೦೦ ಮತ್ತು ರೂ. ೧೦೦೦ ನೋಟುಗಳನ್ನು ನಿಷೇಧಿಸುವ ಮೂಲಕ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಎಂತಹ ಕ್ರಾಂತಿಕಾರಿ, ಬಲಿಷ್ಠ ನಿರ್ಧಾರವನ್ನು ಕೈಗೊಂಡಿದೆ ಎಂಬ ಅರಿವಾಗುತ್ತದೆ.
ಈ ನಿರ್ಧಾರ ಬಿಜೆಪಿಗೂ ಅತ್ಯಂತ ಕಠಿಣ ಸವಾಲಾಗಿತ್ತು. ಆದರೆ ಈ ನಿರ್ಧಾರದಿಂದ ನಮ್ಮ ದೇಶದ ಕೊಳೆ ಖಂಡಿತವಾಗಿಯೂ ತೊಳೆಯಲ್ಪಡುತ್ತದೆ. ಅದ್ಭುತ ರೀತಿಯಲ್ಲಿ ಆರ್ಥಿಕ ಪ್ರಗತಿಯಾಗುತ್ತದೆ. ಮುಂದಿನ ವರ್ಷದಲ್ಲಿ ದೇಶದ ಸಮಗ್ರ ಅಭಿವೃದ್ಧಿಯಾಗುತ್ತದೆ.
ಈ ಬಲಿಷ್ಠ ಕ್ರಮವನ್ನು ಕೈಗೊಂಡ ದೂರದೃಷ್ಟಿತ್ವ ಹೊಂದಿರುವ ಪ್ರಧಾನಿ ಮೋದಿಗೆ ನನ್ನ ಸೆಲ್ಯೂಟ್ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.