ಜಾರ್ಖಂಡ್ : ಜಾರ್ಖಂಡ್ನ ನಕ್ಸಲ್ ಪೀಡಿತ ಗ್ರಾಮವೊಂದು ಪ್ರಪ್ರಥಮವಾಗಿ ವಿದ್ಯುತ್ ಸಂಪರ್ಕ ಹೊಂದುವ ಮೂಲಕ ಈ ವರ್ಷ ನಿಜವಾದ ದೀಪಾವಳಿ ಹಬ್ಬವನ್ನು ಆಚರಿಸಿದೆ.
ನವದೆಹಲಿಯಿಂದ ಸುಮಾರು 1400 ಕಿ. ಮೀ. ಹಾಗೂ ರಾಂಚಿ ರಾಜ್ಯದಿಂದ 175 ಕಿ.ಮೀ. ದೂರದಲ್ಲಿರುವ ಗಾರು ಹಳ್ಳಿಯು ಲತೆಹರ ಜಿಲ್ಲೆಯ ವ್ಯಾಪ್ತಿಯಲ್ಲಿದೆ ಹಾಗೂ ರಾಜ್ಯದ ಅತೀ ಹೆಚ್ಚು ನಕ್ಸಲ್ ಪೀಡಿತ ಪ್ರದೇಶವಾಗಿದೆ.
‘ನಾವು ಬಹಳ ಸಮಯದಿಂದ ವಿದ್ಯುತ್ ಸಂಪರ್ಕಕ್ಕಾಗಿ ಕಾಯುತ್ತಿದ್ದೆವು. ಸರಕಾರಿ ಜನಪ್ರತಿನಿಧಿಗಳು ಬಹಳ ದಿನಗಳಿಂದ ವಿದ್ಯುತ್ ಸಂಪರ್ಕ ಕೊಡುವ ಭರವಸೆ ನೀಡುತ್ತಿದ್ದರೂ ಅಂತಿಮವಾಗಿ ಈ ವರ್ಷ ನಾವು ಅದನ್ನು ಪಡೆಯುವಂತಾಯಿತು’ ಎಂದು ಹಳ್ಳಿಯ ನಿವಾಸಿ ಶಿವಶಂಕರ ಸಿಂಗ್ ಹೇಳಿದ್ದಾರೆ.
ವಿದ್ಯುತ್ ಬಂದ ನಂತರ ಇಲ್ಲಿಯ ಕೃಷಿಯು ಸುಧಾರಣೆ ಕಂಡಿದೆ. ವಿದ್ಯುತ್ ಸಂಪರ್ಕದ ಈ ಮಹತ್ತರ ಹೆಜ್ಜೆಗೆ ಜನ ವೋಲ್ಟೆಜ್ ಕಮ್ಮಿ ಇದ್ದರೂ ಸಂತಸದಿಂದ್ದಾರೆ, ಎಂದು ಗ್ರಾಮ ಸದಸ್ಯ ಸುಖದೇವ ಓರಾನ್ ಹೇಳಿದ್ದಾರೆ.
ಇಲ್ಲಿನ ನಕ್ಸಲ್ ಚಟುವಟಿಕೆಗಳಿಂದಾಗಿ ಗಾರು ಹಳ್ಳಿಯನ್ನು ಬಹಳ ಸಮಯದಿಂದ ಅಭಿವೃದ್ಧಿಯ ಯೋಜನೆಗಳಲ್ಲಿ ಕಡೆಗಣಿಸಲಾಗಿತ್ತು. ನಕ್ಸಲೈಟ್ಗಳು ಈ ಪ್ರದೇಶದಲ್ಲಿ ಅಭಿವೃದ್ಧಿ ಮಾಡಲು ವಿರೋಧಿಸುತ್ತಿದ್ದ ಕಾರಣ ಯಾವುದೇ ಖಾಸಗಿ ಬಿಲ್ಡರ್ಗಳು ಗುತ್ತಿಗೆ ತೆಗೆದುಕೊಳ್ಳಲು ತಯಾರಿರಲಿಲ್ಲ. ಸಿಆರ್ಪಿಎಫ್ ಅವರ ಸುರಕ್ಷೆ ಹಾಗೂ ಭದ್ರತೆಯ ಭರವಸೆಯ ನಂತರವೇ ಇಲ್ಲಿನ ರಸ್ತೆ ಕಾಮಗಾರಿಗಳು ಪ್ರಾರಂಭವಾಗಿದ್ದು’ ಎಂದು ಸಿಆರ್ಪಿಎಫ್ನ 112ನೇ ಬಟಾಲಿಯನ್ ಕಮಾಂಡೆಂಟ್ ರಮೇಶ ಕುಮಾರ್ ತಿಳಿಸಿದ್ದಾರೆ.
ನಮ್ಮ ಸಶಸ್ತ್ರ ಪಡೆಗಳು ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ಯಾವುದೇ ಅಡೆತಡೆಗಳು ಬಾರದಂತೆ ಅವರಿಗೆ ರಕ್ಷಣೆ ಒದಗಿಸುತ್ತಿದ್ದರು. ಈಗ ಇಡೀ ಪ್ರದೇಶ ರಸ್ತೆ ಸಂಪರ್ಕದಿಂದ ಕೂಡಿದೆ ಎಂದು ರಮೇಶ ಹೇಳಿದರು.
ಗಾರು ಪ್ರದೇಶದ ಶಾಸಕ ಪ್ರತಿನಿಧಿ ರಾಮ ಲಾಲ್ ಪ್ರಸಾದ್, ಸಿಆರ್ಪಿಎಫ್ ಬಂದ ಮೇಲೆ ಈ ಪ್ರದೇಶದಲ್ಲಿ ಬಹಳಷ್ಟು ಬದಲಾವಣೆ ಕಂಡು ಬಂದಿದೆ ಎಂದು ಹೇಳಿದ್ದಾರೆ.
’ಗಾರು ಹಳ್ಳಿಗೆ ಇದೇ ಪ್ರಥಮವಾಗಿ ವಿದ್ಯುತ್ ಸಂಪರ್ಕ ಬಂದಿದ್ದು, ಜನ ನಿಜವಾದ ದೀಪಾವಳಿಯನ್ನು ಆಚರಿಸಿದ್ದಾರೆ’ ಎಂದು ಹಳ್ಳಿಯ ನಿವಾಸಿ ಸಂಜಯ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.