ಉತ್ತರ ಪ್ರದೇಶ : ನೋಟು ರದ್ಧತಿಗೆ ಪ್ರಧಾನಿ ಮೋದಿ ಎಲ್ಲರಲ್ಲೂ ಸಹಕಾರವನ್ನು ಕೋರಿದ್ದರು. ಇದೀಗ ಮಕ್ಕಳೂ ತಮ್ಮ ತಂದೆ-ತಾಯಿಗೆ ಸಹಾಯ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಅವರೂ ಸಹಕರಿಸುತ್ತಿದ್ದಾರೆ.
ಕೇಂದ್ರ ಸರ್ಕಾರದ ರೂ. 500 ಮತ್ತು 1000 ರೂ. ನೋಟುಗಳ ನಿಷೇಧ ಹಿನ್ನೆಲೆಯಲ್ಲಿ ಅನೇಕರಿಗೆ ದಿನನಿತ್ಯದ ಖರ್ಚಿಗೆ ಹಣದ ತೊಂದರೆಯಾಗುತ್ತಿತ್ತು. ಏಕೆಂದರೆ ಅವರ ಹತ್ತಿರವಿರುವ ಹಳೇ ನೋಟುಗಳನ್ನು ದಿನಸಿ ಅಂಗಡಿಯಲ್ಲಾಗಲಿ, ಮಾರ್ಕೆಟ್ನಲ್ಲಾಗಲಿ ಸ್ವೀಕರಿಸುತ್ತಿರಲಿಲ್ಲ. ಇದರಿಂದಾಗಿ ಅವರಿಗೆ ಊಟ-ತಿಂಡಿಗೆ ಅಡಚಣೆ ಉಂಟಾಗುತ್ತಿತ್ತು.
ಹಣ ಬದಲಾಯಿಸಲು ಬ್ಯಾಂಕ್ ಮತ್ತು ಎಟಿಎಂನ ಮುಂದೆ ತಾಸುಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಈ ಪರಿಸ್ಥಿತಿಯನ್ನು ಮನಗಂಡ ಮಕ್ಕಳು ತಾವು ಪಿಗ್ಗಿ ಬ್ಯಾಂಕ್ನಲ್ಲಿ ಕೂಡಿಸಿಟ್ಟ ಚಿಲ್ಲರೆ ಹಣವನ್ನು ತಮ್ಮ ಅಪ್ಪ-ಅಮ್ಮನಿಗೆ ಕೊಡುವ ಮೂಲಕ ಸಹಾಯ ಮಾಡುತ್ತಿದ್ದಾರೆ.
ಉತ್ತರಪ್ರದೇಶದ ಬಹರಾಯಿಚ್ ನಗರದ ಮೊಹಲ್ಲಾದ ಖತ್ರಿಪುರನ ನಿವಾಸಿ ಆಲೋಕ ಶ್ರೀವಾತ್ಸವ್ ಅವರ ಮಕ್ಕಳಾದ ಅಂಶ ಶ್ರೀವಾತ್ಸವ ಮತ್ತು ಅಂಶಿ ಶ್ರೀವಾತ್ಸವ್ ತಮ್ಮ ಪಿಗ್ಗಿ ಬ್ಯಾಂಕ್ ಡಬ್ಬವನ್ನು ಒಡೆದು ಸುಮಾರು ರೂ. 2,000 ದಷ್ಟು 5, 10 ರೂ.ಗಳ ಚಿಲ್ಲರೆ ಹಣವನ್ನು ಶನಿವಾರ ತಮ್ಮ ಅಪ್ಪನಿಗೆ ನೀಡಿದ್ದಾರೆ.
3 ದಿನದಿಂದ ಹಣದ ತೊಂದರೆಯುಂಟಾಗಿತ್ತು, ಮಕ್ಕಳ ಈ ಹಣದಿಂದ ಮನೆಯಲ್ಲಿ ಅಡುಗೆ ಮಾಡಲು ಸಹಾಯವಾಗಿದೆ ಎಂದು ಆಲೋಕ್ ಹೇಳುತ್ತಾರೆ. ಅಲ್ಲದೇ ಹೊಸ ನೋಟು ಸಿಕ್ಕ ತಕ್ಷಣ ಮಕ್ಕಳ ಪಿಗ್ಗಿ ಬ್ಯಾಂಕ್ಗೆ ಅದರ ಎರಡರಷ್ಟು ಹಣ ಹಾಕುತ್ತೇವೆಂದು ಮಕ್ಕಳಿಗೆ ಹೇಳಿದ್ದಾಗಿ ಹೇಳಿದರು.
ನಗರದ ದಿವಾನಿ ಕಚೆಹರಿಯ ನಿವಾಸಿಯಾದ ಅಧಿವಕ್ತಾ ಕುಮಾರ್ ಅವರ ಮಕ್ಕಳಾದ ವಂಶ ಮತ್ತು ವಿರಾಜ್ ಅವರು ಸಹ ತಮ್ಮ ಪಿಗ್ಗಿ ಡಬ್ಬವನ್ನು ಒಡೆದು ತಮ್ಮ ಅಪ್ಪ-ಅಮ್ಮನಿಗೆ ದಿನದ ಖರ್ಚು ನಿರ್ವಹಿಸಲು 2,600 ಹಣವನ್ನು ನೀಡಿದ್ದಾರೆ. ಇದರಿಂದಾಗಿಯೇ ದಿನನಿತ್ಯದ ಖರ್ಚುಗಳನ್ನು ತೂಗಿಸಲು ಸಹಾಯಕವಾಗಿದೆ ಎಂದು ಕುಮಾರ್ ಹೇಳಿದ್ದಾರೆ. ಅಲ್ಲದೆ ತಮ್ಮ ಮಕ್ಕಳಿಬ್ಬರೂ ಸೈಕಲ್ ತೆಗೆದುಕೊಳ್ಳಲು ಈ ಹಣವನ್ನು ಸಂಗ್ರಹಿಸುತ್ತಿದ್ದರು. ಇದೀಗ ನಮಗೆ ನೀಡಿದ್ದಾರೆ. ಮಕ್ಕಳ ಈ ನಿಲುವು ನಮಗೇ ಆಶ್ಚರ್ಯವಾಗಿದೆ ಎಂದಿದ್ದಾರೆ.
ಇವೆರಡೇ ಘಟನೆಗಳಲ್ಲ, ದೇಶದೆಲ್ಲೆಡೆ ಅನೇಕ ಕಡೆಗಳಲ್ಲಿ ಇಂದು ಮಕ್ಕಳು ಈ ರೀತಿಯ ಸಹಾಯವನ್ನು ಮಾಡುತ್ತಿದ್ದಾರೆ. ಅದು ಕೂಡಾ ಸ್ವ-ಇಚ್ಛೆಯಿಂದೆ. ಯಾರೊಬ್ಬರೂ ಮಕ್ಕಳನ್ನು ಗದರಿಸಿ, ಬೆದರಿಸಿ ಅವರಿಂದ ಹಣವನ್ನು ಪಡೆಯುತ್ತಿಲ್ಲ. ಆದರೂ ತಾವು ಸಂಗ್ರಹಿಸಿಟ್ಟ ಹಣದ ಮೇಲೆ ಅತಿ ಹೆಚ್ಚು ವ್ಯಾಮೋಹವಿದ್ದದರೂ, ತಂದೆ-ತಾಯಿಗಳ ನಂಬಿಕೆಯ ಮೇರೆಗೆ ಅವರು ಇಂದು ಹಣವನ್ನು ಅವರಿಗೆ ಕೊಡುತ್ತಿದ್ದಾರೆ.
ಇದೇ ರೀತಿ ಮೋದಿ ಕೂಡಾ ಅದನ್ನೇ ಹೇಳಿರುವುದು, ನೀವು ಸಂಗ್ರಹಿಸಿಟ್ಟ ನಿಮ್ಮ ಹಣ ಇನ್ನೂ ಸುರಕ್ಷತೆಯಿಂದಿರಲೇ ಎಂದೇ ನಮ್ಮ ಯೋಜನೆ ಇದು. ಪ್ರಾಮಾಣಿಕತೆಯಿಂದ ದುಡಿದ ನಿಮ್ಮ ಪ್ರತಿ ಹಣಕ್ಕೂ ಬೆಲೆಯಿದೆ. ಸ್ವಲ್ಪ ದಿನಗಳ ಕಾಲ ಕಷ್ಟವನ್ನು ಸಹಿಸಿಕೊಂಡು, ದೇಶದ ಅಭಿವೃದ್ಧಿಗೆ ಸಹಕರಿಸಿ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.