ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮಕ್ಕಳ ದಿನಾಚಣೆ ಸಂದರ್ಭ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ.
ರಾಜೀವ್ ಗಾಂಧಿ ಮಾನವ ಸೇವಾ ವಿಭಾಗದ ಅಡಿಯಲ್ಲಿ ವೈವಕ್ತಿಕ ಪ್ರಶಸ್ತಿ ಹಾಗೂ ರಾಷ್ಟ್ರೀಯ ಪ್ರಶಸ್ತಿಯನ್ನು ವೈಯಕ್ತಿಕವಾಗಿ ಮತ್ತು ಮಕ್ಕಳ ಕಲ್ಯಾಣ ಸಂಸ್ಥೆಗಳಿಗೆ ವಿತರಿಸಲಿದ್ದಾರೆ.
ವಿಶೇಷ ಸಾಧನೆಗಾಗಿ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ, 2016ರ ಅಡಿಯಲ್ಲಿ ಒಂದು ಚಿನ್ನದ ಪದಕ, 30 ಬೆಳ್ಳಿ ಪದಕಗಳು, ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು. ಚಿನ್ನದ ಪದಕ ವಿಜೇತರಿಗೆ ರೂ.20,000 ಮತ್ತು ಬೆಳ್ಳಿ ಪದಕ ವಿಜೇತರಿಗೆ ರೂ.10,000 ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. 5-18 ವರ್ಷದೊಳಗಿನ ಮಕ್ಕಳಿಗೆ ಈ ಪ್ರಶಸ್ತಿಗಳನ್ನು ವಿತರಿಸಲಾಗುವುದು.
ಮಕ್ಕಳ ಕಲ್ಯಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ, 2015ರ ಅಡಿಯಲ್ಲಿ 5 ಸಂಸ್ಥೆಗಳಿಗೆ ರೂ 3 ಲಕ್ಷ ಬಹುಮಾನ ಮತ್ತು ರೂ.1 ಲಕ್ಷ ವೈಯಕ್ತಿಕ ಬಹುಮಾನವನ್ನು ಪ್ರಣಬ್ ಮುಖರ್ಜಿ ಅವರು ವಿತರಿಸಲಿದ್ದಾರೆ.
ರಾಜೀವ್ ಗಾಂಧಿ ಮಾನವ ಸೇವಾ ಪ್ರಶಸ್ತಿ 2016ರ ಅಡಿಯಲ್ಲಿ 3 ಮಂದಿ ವಿದ್ಯಾರ್ಥಿಗಳಿಗೆ ರಾಜೀವ್ ಗಾಂಧಿ ಮಾನವ ಸೇವಾ ಪ್ರಶಸ್ತಿ, ರೂ.1 ಲಕ್ಷ ಬಹಮಾನ, ಪ್ರಮಾಣಪತ್ರ ಮತ್ತು ಬೆಳ್ಳಿ ಫಲಕ ನೀಡಲಾಗುವುದು ಎಂದು .
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.