ನವದೆಹಲಿ : ನವೆಂಬರ್ 8 ರಿಂದ ಘೋಷಿಸಲ್ಪಟ್ಟ ನೋಟುಗಳ ರದ್ಧತಿ ಹಿನ್ನಲೆಯಲ್ಲಿ ಎಟಿಎಂಗಳಲ್ಲಿ ವಿತ್ಡ್ರಾ ಮಾಡುವ ಮಿತಿ ರೂ. 2000 ವನ್ನು ಇಂದಿನಿಂದ ರೂ. 2,500 ಕ್ಕೆ ಏರಿಕೆ ಮಾಡಲಾಗಿದೆ.
ರೂ. 500 ಮತ್ತು ರೂ. 1000 ನೋಟುಗಳ ಮೇಲೆ ನಿಷೇಧ ಹೇರಿರುವ ಹಿನ್ನಲೆಯಲ್ಲಿ ವಿತ್ಡ್ರಾ ಹಾಗೂ ವಿನಿಮಯ ಮಾಡಿಕೊಳ್ಳುವ ಮಿತಿಯನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿದೆ. ದಿನವೊಂದಕ್ಕೆ ರೂ. 2,000 ದಿಂದ ರೂ. 2,500 ಕ್ಕೆ ಮತ್ತು ವಾರಕ್ಕೆ ರೂ. 20,000 ದಿಂದ ರೂ. 24,000 ಕ್ಕೆ ಏರಿಸಲಾಗಿದೆ. ಬ್ಯಾಂಕ್ಗಳಲ್ಲಿ ವಿನಿಮಯ ಮಿತಿಯನ್ನು ದಿನವೊಂದಕ್ಕೆ ರೂ. 4000 ಇದ್ದದ್ದನ್ನು ಇಂದಿನಿಂದ ರೂ. 4,5000 ಕ್ಕೆ ಏರಿಕೆ ಮಾಡಲಾಗಿದೆ.
ವಿತ್ಡ್ರಾ ಮಿತಿ ಏರಿಕೆ ಮಾಡಿರುವುದರಿಂದ ಜನರಿಗೆ ಕೊಂಚ ನಿರಾಳವಾಗಿದೆ. ನವೆಂಬರ್ 8 ರಿಂದ ನೋಟು ರದ್ಧತಿ ಹಿನ್ನಲೆಯಲ್ಲಿ ಬ್ಯಾಂಕ್ ಮತ್ತು ಎಟಿಎಂಗಳ ಮುಂದೆ ಬಹಳಷ್ಟು ಜನಸಂದಣಿ ಇದ್ದುದ್ದರಿಂದ ಕೆಲವರು ಬಹಳಷ್ಟು ಸಮಯ ಕಾದು ಹಣವನ್ನು ಪಡೆದುಕೊಳ್ಳಬೇಕಾಗಿತ್ತು. ಇಂದಿನಿಂದ ವಿತ್ಡ್ರಾ ಮಿತಿ ಜಾಸ್ತಿ ಮಾಡಿರುವುದು ಜನರಿಗೆ ಅನುಕೂಲವಾಗಲಿದೆ.
ಸರ್ಕಾರಿ ನಿಯಂತ್ರಿತ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಕಷ್ಟವಾಗದಿರುವಂತೆ ಪ್ರತ್ಯೇಕ ಬ್ಯಾಂಕ್ಗಳು ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಮಾಡಬೇಕೆಂದು ಈಗಾಗಲೇ ಕೇಂದ್ರ ಸರ್ಕಾರ ಎಲ್ಲಾ ಬ್ಯಾಂಕ್ಗಳಿಗೆ ಸೂಚನೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.