ಶ್ರೀನಗರ: ಇಟಲಿಯಲ್ಲಿ ನಡೆದ ವಿಶ್ವ ಕಿಕ್ ಬಾಕ್ಸಿಂಗ್ ಸ್ಪರ್ಧೆಯ ಸಬ್-ಜೂನಿಯರ್ (ಉಪ-ಕಿರಿಯರ) ವಿಭಾಗದಲ್ಲಿ ಭಾರತದ 8 ವರ್ಷದ ತಾಜಮುಲ್ ಇಸ್ಲಾಮ್, ಬಂಗಾರದ ಪದಕ ಗೆಲ್ಲುವ ಮೂಲಕ ದಾಖಲೆ ಬರೆದಿದದ್ದು ಭಾರತ ಹೆಮ್ಮೆ ಪಡುವಂತೆ ಮಾಡಿದ್ದಾಳೆ.
ಜಮ್ಮು ಮತ್ತು ಕಾಶ್ಮೀರದ ಬಂದಿಪೋರಾ ಜಿಲ್ಲೆಯವಳಾದ ತಾಜಮುಲ್ ಇಟಲಿಯಲ್ಲಿ ಭಾಗವಹಿಸಿದ್ದ ಸ್ಪರ್ಧೆಗೆ 90 ದೇಶಗಳಿಂದ ಪ್ರತಿಸ್ಪರ್ಧಿಗಳು ಬಂದಿದ್ದರು. ಐದು ದಿನಗಳ ಕಾಲ ನಡೆದ ಈ ಸ್ಪರ್ಧೆಯಲ್ಲಿ ತಾಜಮುಲ್ ಭಾರತದ ಕಿಕ್ ಬಾಕ್ಸಿಂಗ್ ಫೆಡರೇಶನ್ ಬೆಂಬಲದೊಂದಿಗೆ ಭಾಗಿಯಾಗಲು ಸಹಾಯವಾಯಿತು ಎಂದು ತಾಜಮುಲ್ ಕೋಚ್ ಮಾಸ್ಟರ್ ಫಾಸಿಲ್ ಅಲಿ ಹೇಳಿದ್ದಾರೆ.
5 ದಿನಗಳ ಕಾಲ ನಡೆದ ಸ್ಪರ್ಧೆಯಲ್ಲಿ 6 ಪಂದ್ಯಗಳನ್ನು ತಾಜಮುಲ್ ಗೆದ್ದಿದ್ದು, ವಿಶ್ವದ ಗಮನ ಸೆಳೆದಿದ್ದಾಳೆ. ಫೈನಲ್ ಪಂದ್ಯದಲ್ಲಿ ಯುಸ್ನ ಪ್ರತಿಸ್ಪರ್ಧಿಯನ್ನು ಸೋಲಿಸಿ ತಾಜಮುಲ್ ಇಸ್ಲಾಮ್ ಕಿಕ್ ಬಾಕ್ಸಿಂಗ್ನಲ್ಲಿ ಬಂಗಾರದ ಪದಕ ಗೆಲ್ಲುವ ಮೂಲಕ ವಿಶ್ವ ಚಾಂಪಿಯನ್ ಆಗಿದ್ದಾಳೆ.
ನವದೆಹಲಿಯ ತಲ್ಕತೋರಾ ಕ್ರೀಡಾಂಗಣದಲ್ಲಿ 2015 ರಲ್ಲಿ ನಡೆದಿದ್ದ ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆದ ಸಾಧನೆಯ ಪ್ರತಿಯಾಗಿ ತಾಜಮುಲ್ಗೆ ವಿಶ್ವ ಚಾಂಪಿನ್ಶಿಪ್ನಲ್ಲಿ ಭಾಗವಹಿಸಲು ಪ್ರವೇಶ ಸಿಕ್ಕಿತ್ತು.
ಜಮ್ಮು ಕಾಶ್ಮೀರದ ಬಂದಿಪೋರಾ ಜಿಲ್ಲೆಯವರು ಬೃಹತ್ ಸಂಭ್ರಮಾಚರಣೆಯನ್ನು ಏರ್ಪಡಿಸಿದ್ದು, ತಾಜಮುಲ್ ಇಸ್ಲಾಂ ಆಗಮನವನ್ನು ಕಾತುರದಿಂದ ಕಾಯುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.