ನವದೆಹಲಿ : ಅಮೇರಿಕಾದಲ್ಲಿರುವ ಭಾರತೀಯ ಮಹಿಳೆ ಮತ್ತು ಆಕೆಯ ಮಗುವಿಗೆ ಸಹಾಯಹಸ್ತ ನೀಡುವ ಮೂಲಕ ಸೂಪರ್ ಮಾಮ್ ಎಂದೇ ಖ್ಯಾತಿಯಾಗಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮತ್ತೊಮ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಉತ್ತರ ಪ್ರದೇಶ ಮೂಲದ ದೀಪಿಕಾ ಪಾಂಡೆ ಎನ್ನುವವರು ಸಾಫ್ಟ್ವೇರ್ ಇಂಜನೀಯರ್ ಹರಿಓಂ ಪಾಂಡೆಯವರನ್ನು ವಿವಾಹವಾಗಿದ್ದು, ವಾಷಿಂಗ್ಟನ್ಲ್ಲಿ ವಾಸಿಸುತ್ತಿದ್ದರು. ಇವರಿಗೆ 4 ವರ್ಷದ ಗಂಡುಮಗು ಇದೆ. ಆದರೆ ಕೆಲ ವಾರಗಳ ಹಿಂದೆ ವಿಧಿಯ ಆಟಕ್ಕೆ ಸಿಕ್ಕಿದ ಕುಟುಂಬಕ್ಕೆ ದೊಡ್ಡ ಆಘಾತವಾಗಿದೆ. ಅದು ಹರಿಓಂ ಪಾಂಡೆಯವರು ಹೃದಯಾಘಾತದಿಂದ ಮೃತಪಟ್ಟಿದ್ದು. ದೀಪಿಕಾ ಪಾಂಡೆಯವರು ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಹೆಚ್ಚಿನ ಚಿಕಿತ್ಸೆ ದೃಷ್ಟಿಯಿಂದ ಅವರನ್ನು ಸ್ನೇಹಿತರು ನ್ಯೂಜರ್ಸಿಗೆ ಕರೆದುಕೊಂಡು ಹೋಗಿದ್ದಾರೆ. ದೀಪಿಕಾ ಅವರಿಗೆ ಆರೋಗ್ಯ ವಿಮೆ ಇದ್ದರೂ ಅಲ್ಲಿ ಪ್ರಯೋಜನವಾಗುತ್ತಿಲ್ಲ. ಕಾರಣ ಅಮೇರಿಕಾದಲ್ಲಿ ಒಂದು ರಾಜ್ಯದ ವಿಮೆ ಮತ್ತೊಂದು ರಾಜ್ಯದಲ್ಲಿ ಚಾಲ್ತಿಯಲ್ಲಿಲ್ಲ .ಇದರಿಂದಾಗಿ ದೀಪಿಕಾ ಮತ್ತು ಆಕೆಯ ಮಗುವಿನ ಚಿಕಿತ್ಸೆಗೆ ತೊಂದರೆಯಾಗುತ್ತಿದೆ. ಹೀಗಾಗಿ ಭಾರತಕ್ಕೆ ಮರಳಲು ನಿರ್ಧರಿಸಿದ ದೀಪಿಕಾ ತಮ್ಮ ಮಗುವಿಗೆ ಅಮೇರಿಕಾ ಸರ್ಕಾರ OCI (Overseas Citizenship in India) ನೀಡಬೇಕೆಂದು ಪತ್ರ ಬರೆದಿದ್ದಾರೆ. ಭಾರತದಲ್ಲಿ ದೀಪಿಕಾ ಕುಟುಂಬದವರು ಮಗು ಜನಿಸುವ ಮೊದಲೇ ಅವರಿಗೆ ಆರೋಗ್ಯ ವಿಮೆ ನೀಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ಸುಷ್ಮಾ ಸ್ವರಾಜ್ ಆವರಿಗೆ ಟ್ವೀಟ್ ಮಾಡುವ ಮೂಲಕ ಸಹಾಯ ಕೋರಿದ್ದಾರೆ.
ದೀಪಿಕಾ ಅವರು ಬರೆದ ಪತ್ರ ಮತ್ತು ನವಜಾತ ಮಗುವಿನೊಂದಿಗಿರುವ ಚಿತ್ರ ಟ್ವಿಟರ್ಗಳಲ್ಲಿ ಬಹಳಷ್ಟು ಹರಿದಾಡಿತು. ಸುಷ್ಮಾ ಸ್ವರಾಜ್ ಅವರು ದೀಪಿಕಾ ಅವರಿಗೆ ಟ್ವೀಟ್ ಮಾಡಿ, ಈ ಕಷ್ಟಕರ ಪರಿಸ್ಥಿತಿಯಲ್ಲಿ ನಿಮ್ಮೊಂದಿಗೆ ನಾವಿದ್ದೇವೆ. ಯುಎಸ್ನ ಭಾರತೀಯ ರಾಯಭಾರಿಯವರ ಬಳಿ ಮಾತನಾಡಿದ್ದೇವೆ. ಅಗತ್ಯ ಸಹಾಯವನ್ನು ಅವರು ಮಾಡುವರು ಎಂದು ಭರವಸೆ ನೀಡಿದ್ದಾರೆ.
Deepika – We are with you in this hour of tragedy. I have asked @IndianEmbassyUS to help you. @BJPLucknowBJP @templetree1
— Sushma Swaraj (@SushmaSwaraj) November 9, 2016
ಎಂದಿನಂತೆ ಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ನೀಡುವ ಮೂಲಕ ಈ ಬಾರಿಯೂ ಸುಷ್ಮಾ ಸ್ವರಾಜ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.