ನವದೆಹಲಿ: 1978ರ ನಂತರ ದೇಶದಲ್ಲಿ ಭ್ರಷ್ಟಾಚಾರ ವಿರುದ್ಧದ ಶಿಸ್ತುಕ್ರಮ ಹೊಸ ಆರ್ಥಿಕ ಲಾಭ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ರೂ.500 ಮತ್ತು ರೂ.1000 ಮುಖಬೆಲೆಯ ನೋಟುಗಳ ನಿಶೇಧದ ನಿರ್ಧಾರಕ್ಕೆ ವಿದೇಶಿ ಮಾಧ್ಯಮಗಳು ಸಕಾರಾತ್ಮಕ ಪ್ರತಿಕ್ರಿಯೆ ನೀಡಿವೆ.
ಭಾರತದ ಅತೀ ದೊಡ್ಡ ಆನ್ಲೈನ್ ಶಾಪಿಂಗ್ ಕಂಪೆನಿ Paytm ದಿನಪತ್ರಿಕೆಯೊಂದರಲ್ಲಿ ಒಂದು ಪುಟದ ಮೋದಿ ಅವರ ಫೋಟೋ ಸಹಿತ ಜಾಹಿರಾತು ಪ್ರಕಟಿಸಿ ಫ್ರಶಂಸೆ ವ್ಯಕ್ತಪಡಿಸಿದೆ.
ಭಾರತದಲ್ಲಿ ಒಬ್ಬ ತಂತ್ರಜ್ಞಾನ ಉದ್ಯಮಿಗೆ ಸುವರ್ಣ ಯುಗ ಇದಾಗಿದೆ ಎಂದು Paytm ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಟ್ವೀಟ್ ಮಾಡಿದ್ದಾರೆ. ಅದರ ಹೂಡೊಕೆದಾರರಲ್ಲಿ ಒಂದಾಗಿರುವ ಅಲಿಬಾಬಾ ಗ್ರೂಪ್ ‘ಕೀಪ್ ದ ಮನಿ ಡಿಜಿಟಲ್’ ಎಂದು ಹೇಳಿದೆ.
ಭಾರತದ ತಂತ್ರಜ್ಷಾನ ಸೇವೆಗಳ ವ್ಯಾಪಾರ ಅಂಗ Nasscom ಮೋದಿ ಅವರ ಈ ಹೆಜ್ಜೆಯನ್ನು ‘ಮಾಸ್ಟರ್ಸ್ಟ್ರೋಕ್’ ಎಂದು ಹೇಳಿದೆ. ಒಲಾ ಕ್ಯಾಬ್ ಸಹ-ಸಂಸ್ಥಾಪಕ ಹಾಗೂ ಮುಖ್ಯಕಾಯಾನಿರ್ವಾಹಕ ಭವಿಶ್ ಅಗ್ರವಾಲ್ ಅವರು ಇದೊಂದು ನಗದು ರಹಿತ ಆರ್ಥಿಕ ವ್ಯವಸ್ಥೆಗೆ ಮೊದಲ ಪ್ರಮುಖ ಹೆಜ್ಜೆ ಎಂದು ಹೇಳಿದ್ದರೆ.
ಪ್ರಧಾನಿ ಮೋದಿ ಅವರ ಈ ಯೋಜನೆ ‘ಮಹತ್ವಾಕಾಂಶಿಯಾಗಿದೆ. ಚುನಾವಣೆಯ ಸಂದರ್ಭ ವರು ಮಾಡಿದ ಶಪಥದ ದೃಷ್ಟಿಯಿಂದ ಇದು ಉತ್ತಮ ಹೆಜ್ಜೆಯಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ಹೇಳಿದೆ.
ಭ್ರಷ್ಟಾಚಾರ ಭೇದಿಸಲು ದೀರ್ಘಕಾಲದ ಹೋರಾಟದಲ್ಲಿ ಭಾರತ ಆರ್ಥಿಕತೆಯ ನೆರಳಿನಲ್ಲಿ ಒಂದು ದಿಟ್ಟ ಹೆಜ್ಜೆ ಕೈಗೊಂಡಿದೆ ಎಂದು ಯುಕೆಯ ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.