ಶ್ರೀನಗರ: ಕದನ ವಿರಾಮ ಉಲ್ಲಂಘನೆ ಮತ್ತು ಎನ್ಕೌಂಟರ್ನಲ್ಲಿ ಪ್ರಾಣ ಕಳೆದುಕೊಂಡ ಸೈನಿಕರಿಗೆ ಗೌರವ ಸಲ್ಲಿಸಲು ಬಾಲಿವುಡ್ ನಟ ಅಕ್ಷಯ್ ಕುಮಾರ್ ಜಮ್ಮು-ಕಾಶ್ಮೀರದ ಬಿಎಸ್ಎಫ್ ಸೇನಾ ಕ್ಯಾಂಪ್ಗೆ ಮಂಗಳವಾರ ಭೇಟಿ ನೀಡಿದ್ದಾರೆ.
ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಅಕ್ಷಯ್ ಕುಮಾರ್, ಒಂದು ಕ್ಷಣ ಭಾವುಕರಾದರು. ನಮ್ಮ ದೇಶದ ಸೈನಿಕರು ನಿಜವಾದ ಹೀರೋಗಳು ಎಂದು ಹೇಳಿದರು.
ಇಲ್ಲಿ ಬಂದು ನಿಮ್ಮನ್ನು ಭೇಟಿ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ನಾನು ಕೇವಲ ಒಬ್ಬ ರೀಲ್ ಹೀರೋ, ನೀವೇ ನಿಜವಾದ ಹೀರೋಗಳು ಎಂದು ನಾನು ಯಾವತ್ತೂ ಹೇಳುತ್ತಲೇ ಇರುತ್ತೇನೆ ಎಂದು ಅಕ್ಷಯ್ ಕುಮಾರ್ ಹೇಳಿದರು.
ಈ ಹಿಂದೆ ಅಕ್ಷಯ್ ಅವರು ಪಾಕಿಸ್ಥಾನಿ ಉಗ್ರರ ದಾಳಿಗೆ ಗುರಿಯಾಗಿ ವೀರಮರಣ ಹೊಂದಿದ್ದ ಬಿಎಸ್ಎಫ್ ಸೈನಿಕನ ಕುಟುಂಬಕ್ಕೆ 9 ಲಕ್ಷ ರೂ. ನೀಡಿದ್ದರು. ಅದಕ್ಕೂ ಮುನ್ನ ಅಕ್ಷಯ್ ಅವರು ಭಾರತೀಯ ಸೇನೆಗೆ 80 ಲಕ್ಷ ರೂ. ದಾನ ನೀಡಿದ್ದರು.
ಸೈನಿಕರು ಹಲವಾರು ಪದಕಗಳಿಂದ ಅಲಂಕೃತರಾಗಿದ್ದಾರೆ. ಇದು ಒಳ್ಳೆಯ ಸಂಗತಿ. ಸನ್ಮಾನಗಳು ಅಗತ್ಯವಾಗಿದೆ, ಆದರೆ ಅದರ ಜೊತೆಗೆ ಅವರಿಗೆ ಹಣ ಕೂಡ ಬೇಕಾಗಿದೆ. ನಾವು ವಾಸ್ತವವನ್ನು ಅರಿತುಕೊಳ್ಳಬೇಕಿದೆ. ಹೀಗಾಗಿ ನನ್ನ ಮನಸ್ಸಿನಲ್ಲಿ ಧನಸಹಾಯ ಮಾಡುವ ವಿಚಾರ ಮೂಡಿದ್ದು, ನಾನು ಸೈನಿಕರ ಕುಟುಂಬಕ್ಕೆ 5 ಲಕ್ಷ ರೂ. ನೀಡಲು ನಿರ್ಧರಿಸಿದೆ ಎಂದು ಅಕ್ಷಯ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.