ತಿರುವನಂತಪುರ: ವೈಶಕ್ ನಿರ್ದೇಶನದ ಪುಲಿಮುರಗನ್ ಚಿತ್ರ 100 ಕೋಟಿ ರೂಪಾಯಿ ಸಂಗ್ರಹಿಸಿದ ಮೊದಲ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾನವ ಮತ್ತು ಪ್ರಾಣಿ ಸಂಘರ್ಷ ಕೇಂದ್ರಿತವಾದ ಈ ಚಿತ್ರದಲ್ಲಿ ಮೋಹನಲಾಲ್ ನಾಯಕನಟರಾಗಿ ಅಭಿನಯಿಸಿದ್ದಾರೆ.
ಮೋಹನಲಾಲ್ ನಾಯಕರಾಗಿ ನಟಿಸಿದ ದೃಶ್ಯಂ ಚಿತ್ರ 70 ಕೋಟಿ ದಾಟಿತ್ತು. ಆದರೆ ಪುಲಿಮುರಗನ್ ಚಿತ್ರವು ಈ ದಾಖಲೆಯನ್ನು ಮುರಿದಿದೆ.
ಈ ಚಿತ್ರವು 80 ರಾಜ್ಯಗಳಲ್ಲಿ ಮತ್ತು 200 ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ದಿನಕ್ಕೆ 4.5 ಕೋ.ರೂ. ಗಳಿಕೆ ಮಾಡುತ್ತಿದ್ದು ಮಲಯಾಳಂ ಚಿತ್ರರಂಗದಲ್ಲಿ ದಾಖಲೆ ಸೃಷ್ಟಿಸಿದೆ.
ಚಿತ್ರಮಂದಿರದ ಮಾಲಿಕರು ದಿನದಲ್ಲಿ 6 ಷೋಗಳನ್ನು ಮಾಡಲು ನಿರ್ಧರಿಸಿದ್ದು. ಮಾಲಿವುಡ್ ಚಿತ್ರ ಸಂಸ್ಥೆಯಲ್ಲೇ ಅತ್ಯುತ್ತಮ ಚಿತ್ರವೆಂದು ಶ್ಲಾಘಿಸುತ್ತಿದ್ದಾರೆ. ಇವರ ಪ್ರಕಾರ ಚಿತ್ರವು ದಿನಾಂತ್ಯದಲ್ಲಿ 13 ಕೋಟಿ ತಲುಪಬಹುದು.
ಮೋಹನಲಾಲ್ ನಟಿಸಿದ ಈ ಚಿತ್ರವು ಅವರಿಗೆ ಪ್ರಂಶಂಸೆಯ ಗರಿಯನ್ನು ತಂದಿದೆ. ಮೋಹನಲಾಲ್ ಅವರು ನಟಿಸಿದ ಹಲವು ಚಿತ್ರಗಳಿಗಿಂತ ಈ ಚಿತ್ರದಲ್ಲಿನ ಪಾತ್ರವು ಭಿನ್ನವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.