ನವದೆಹಲಿ: ಜಂಕೋ ಅಸೋಸಿಯೇಟ್ಸ್ ಸಲಹಾಸಂಸ್ಥೆಯ ವರದಿಯ ಪ್ರಕಾರ ಅಮೇರಿಕಾದಲ್ಲಿನ ಐಟಿ ಕ್ಷೇತ್ರದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಉದ್ಯೋಗಗಳು ಸೃಷ್ಟಿಯಾಗಿವೆ.
ಕಾರ್ಮಿಕ ಅಂಕಿಅಂಶಗಳ ದತ್ತಾಂಶದ ವಿಶ್ಲೇಷಣೆ ಪ್ರಕಾರ ಕಳೆದ ವರ್ಷದಲ್ಲಿ 114,000 ಇದ್ದ ಉದ್ಯೋಗಾವಕಾಶಗಳು ಈಗ 66,600 ಕ್ಕೆ ಇಳಿದಿವೆ ಎಂದು ವರದಿಯಾಗಿದೆ.
ಜಂಕೋ ವಿಶ್ಲೇಷಣೆಯ ವರದಿಯ ಪ್ರಕಾರ ಐಟಿ ಕ್ಷೇತ್ರದಲ್ಲಿ 2013 ರಲ್ಲಿ 130,000 ಹೊಸ ಉದ್ಯೋಗಗಳು ಇದ್ದವು ಆದರೆ, 2014 ಮತ್ತು 2015 ರಲ್ಲಿ ಉದ್ಯೋಗಗಳ ಸೃಷ್ಟಿ ಕಡಿಮೆಯಾಗುತ್ತಿದೆ ಎಂದು ಹೇಳಿದೆ.
ಈ ಕುಸಿತ ಕೇವಲ ಆರ್ಥಿಕತೆಗೆ ಸಂಬಂಧಿಸಿದ್ದಲ್ಲ. ಹಲವು ಕಂಪನಿಗಳು ನೇಮಕಾತಿ ಪ್ರಕ್ರಿಯೆಯನ್ನು ನಿಲ್ಲಿಸಿವೆ. ಮಾರುಕಟ್ಟೆಯ ಮೇಲೆ ನೇರವಾಗಿ ಪರಿಣಾಮ ಬೀರಿರುವ ಪ್ಯಾರಿಸ್ ಒಪ್ಪಂದ, ಬ್ರೆಕ್ಸಿಟ್, ವಲಸೆ ನೀತಿ ಹಾಗೂ ಅವುಗಳ ಅನುಷ್ಠಾನ (ಯುಎಸ್ ಮತ್ತು ವಿದೇಶಗಳಲ್ಲಿ) ಜೊತೆಯಲ್ಲಿ ಮಧ್ಯಪ್ರಾಚ್ಯದಲ್ಲಿರುವ ಅಸ್ಥಿರ ಅನಿಶ್ಚಿತತೆಗಳ ಚಿತ್ರಣ ಸ್ಪಷ್ಟವಾಗಬೇಕಿದೆ. ತದನಂತರ ಹೆಚ್ಚಿನ ಬದಲಾವಣೆಗಳ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
2017 ರಲ್ಲಿಯೂ ಸಹ ಐಟಿ ಉದ್ಯೋಗಗಳಿಗೆ ಯಾವುದೇ ಖುಷಿಕರ ಸಂಗತಿಯಿಲ್ಲ. ಹಲವು ಕಂಪನಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಮುಂಬರುವ ವರ್ಷಗಳಲ್ಲಿ ಬಜೆಟ್ನ್ನು ಬಿಗಿಯಾಗಿಡಬಹುದು ಎಂದು ವರದಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.