ನವದೆಹಲಿ: ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ‘ಇನ್ಕ್ರೆಡಿಬಲ್ ಇಂಡಿಯಾ’ ಅಭಿಯಾನದ ರಾಯಭಾರಿಯಾಗಲಿದ್ದಾರೆ ಎಂದು ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.
ಈ ವರ್ಷ ನಟ ಆಮೀರ್ ಖಾನ್ ಅವರ ಉಚ್ಚಾಟನೆ ಬಳಿಕ ಬಿಗ್ ಬಿ-ಅಮಿತಾಭ್ ಬಚ್ಚನ್ ಸೇರಿದಂತೆ ಯಾವುದೇ ಬಾಲಿವುಡ್ ನಟರನ್ನು ನೇಮಿಸುವುದಿಲ್ಲ ಎಂದು ಸಚಿವಾಲಯ ಹೇಳಿದೆ.
ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಅಭಿಯಾನದಲ್ಲಿ ಸಿನಿಮಾ ನಟರನ್ನು ತೊಡಗಿಸಿಕೊಳ್ಳುವುದಿಲ್ಲ. ಪ್ರವಾಸೋದ್ಯಮದ ಕುರಿತು ಪ್ರಧಾನಿ ಮೋದಿ ಅವರು ಭಾರತ ಮತ್ತು ವಿದೇಶಗಳಲ್ಲಿ ನೀಡಿದ ಭಾಷಣದ ವೀಡಿಯೋಗಳನ್ನು ಬಳಸಲಾಗುವುದು ಎಂದು ಸಚಿವಾಯಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ದೇಶದ ವಿವಿಧ ಸ್ಥಳಗಳ ವೈವಿಧ್ಯತೆಯ ಕುರಿತು ಪ್ರಧಾನಿ ಮೋದಿ ಅವರ ದೇಶ-ವಿದೇಶಗಳ ಭಾಷಣದ ರೇಡಿಯೋ ಮತ್ತು ಆಡಿಯೋಗಳನ್ನು ಬಳಸಲು ಸಚಿವಾಲಯ ಯೋಜನೆ ಹೊಂದಿದೆ ಅಧಿಕಾರಿ ತಿಳಿಸಿದ್ದಾರೆ.
ನವೆಂಬರ್ ಅಂತ್ಯದಲ್ಲಿ ‘ಪ್ರವಾಸೋದ್ಯಮ ಋತು’ ಆರಂಭವಾಗಲಿದ್ದು, ಪ್ರಸ್ತುತ ಸಚಿವಾಲಯ ವೀಡಿಯೋಗಳ ಆಯ್ಕೆ ಕಾರ್ಯದಲ್ಲಿ ತೊಡಗಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.