ನವದೆಹಲಿ : ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ವಾಹನ ಸಂಚಾರ ದಟ್ಟಣೆಯಿಂದ ಇಡೀ ಪರಿಸರ ಮಲೀನಗೊಂಡಿದ್ದು, ಇದೀಗ ಜನರು ಮನೆಯಿಂದ ಹೊರಬರದ ಸ್ಥಿತಿ ನಿರ್ಮಾಣಗೊಂಡಿದ್ದು ಜನರು ಮನೆಯಲ್ಲಿರುವಂತೆ ಇಂಡಿಯನ್ ಮೆಡಿಕಲ್ ಅಸೋಶಿಯನ ಅಧ್ಯಕ್ಷ ಕೆ.ಕೆ. ಅಗರ್ವಾಲ್ ಕರೆ ನೀಡಿದ್ದಾರೆ.
ದೆಹಲಿಯಲ್ಲಿ ಹೊಗೆಪೂರಿತ ವಾತಾವರಣ ನಿರ್ಮಾಣವಾಗಿದ್ದು ಶಾಲೆಗಳಿಗೆ ಮೂರು ದಿನ ರಜೆ ಘೋಷಿಸಲಾಗಿದ್ದು, ರಜೆಯನ್ನು ಇನ್ನು ಮೂರುದಿನಗಳಿಗೆ ವಿಸ್ತರಿಸಲಾಗಿದೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.
ಮಲೀನಗೊಂಡ ವಾತಾವರಣವನ್ನು ಸರಿಪಡಿಸುವ ಸಲುವಾಗಿ ಕೃತಕ ಮಳೆ ಸುರಿಸಲು ದೆಹಲಿ ಸರ್ಕಾರ ಕೇಂದ್ರದ ಸಹಾಯಹಸ್ತ ಕೇಳಿದೆ. ಅಲ್ಲದೆ ರಸ್ತೆಗಳಿಗೆ ನೀರು ಹರಿಸುವ ಮೂಲಕ ಮತ್ತು ವ್ಯಾಕ್ಯೂಮ್ ಕ್ಲೀನಿಂಗ್ ಮೂಲಕ ಧೂಳು ತೆಗೆಯುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಸಮ-ಬೆಸ ನಿಯಮವನ್ನೂ ಜಾರಿಗೊಳಿಸಲು ಚಿಂತನೆ ನಡೆಸಲಾಗುತ್ತಿದ್ದು, ಮಾಲಿನ್ಯ ಕಡಿಮೆಗೊಳಿಸಲು ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಆದರೆ ವಾಯುಮಾಲಿನ್ಯದಿಂದ ತತ್ತರಿಸುವ ಜನರು ಕಂಗಾಲಾಗಿದ್ದಾರೆ. ವಾಯುಮಾಲಿನ್ಯದಿಂದ ಸ್ವ-ರಕ್ಷಿಸಿಕೊಳ್ಳಲು ದೊರಕುತ್ತಿದ್ದ 30 ರೂ. ನ ಮಾಸ್ಕ್ ದರ ಇದೀಗ ರೂ. 1,000 ಕ್ಕೆ ಏರಿದೆ. ಇದರಿಂದ ಜನಸಾಮಾನ್ಯರು ಪರದಾಡುವಂತಾಗಿದ್ದು ಸರ್ಕಾರ ಗಮನ ಹರಿಸಬೇಕಾದ ಅನಿವಾರ್ಯತೆಯಿದೆ.
ಮನೆಯಲ್ಲಿಯೇ ಇದ್ದು ಮಾಡುವಂತಹ ಕೆಲಸಗಳನ್ನು ಮಾಡುವಂತಿದ್ದರೆ ಮನೆಯಿಂದಲೇ ಕೆಲಸ ಮಾಡಿ, ಅನಿವಾರ್ಯತೆಯಿದ್ದು ಹೊರಗೆ ಹೋಗುವ ಪ್ರಸಂಗ ಬಂದರೆ ಮಾತ್ರ ಮನೆಯಿಂದ ಹೊರಗೆ ಹೋಗಿ ಎಂದು ಕೇಜ್ರಿವಾಲ್ ಜನತೆಗೆ ಹೇಳಿದ್ದಾರೆ.
ವಾಯುಮಾಲಿನ್ಯವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಹರಿಯಾಣ, ರಾಜಸ್ಥಾನ, ಪಂಜಾಬ್ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲು ತುರ್ತುಸಭೆ ಕರೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.