ನವದೆಹಲಿ: ಭಾರತ ಮೂರನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್ 2016) ಜಾಗತಿಕ ವ್ಯಾಪಾರ ಅಭವೃದ್ಧಿ ಸೂಚಿಯಲ್ಲಿ 2ನೇ ಸ್ಥಾನವನ್ನು ಪಡೆದಿರುವುದಾಗಿ ಗ್ರ್ಯಾಂಟ್ ಥಾರ್ನ್ಟನ್ ಇಂಟರ್ನ್ಯಾಶನಲ್ ಬ್ಯುಸಿನೆಸ್ ವರದಿ ಮಾಡಿದೆ.
ಭಾರತ ಸತತ ಎರಡು ತ್ರೈಮಾಸಿಕದಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಕಳೆದ ಎಪ್ರಿಲ್-ಜೂನ್ ಅವಧಿಯಲ್ಲಿ ಮೂರನೇ ಸ್ಥಾನ ಪಡೆದಿತ್ತು.
ಇಂಡೋನೇಷ್ಯಾ ಪ್ರಥಮ ಸ್ಥಾನ ಪಡೆದರೆ, ಫಿಲಿಪೈನ್ಸ್ ಮೂರನೇ ಸ್ಥಾನದಲ್ಲಿದೆ.
ಭಾರತದ ಅಭಿವೃದ್ಧಿ ಶ್ರೇಯಾಂಕ ಸುಧಾರಣೆ ಸರ್ಕಾರದ ವ್ಯಾಪಾರ ಸುಧಾರಣೆ ಪ್ರಯತ್ನ ಮತ್ತು ಸುಧಾರಣಾ ನೀತಿಗಳ ಕಾರ್ಯಸೂಚಿಯನ್ನು ಬಿಂಬಿಸುತ್ತದೆ ಎಂದು ಗ್ರ್ಯಾಂಟ್ ಥಾರ್ನ್ಟನ್ ಇಂಡಿಯಾ ಎಲ್ಎಲ್ಪಿ ಪಾರ್ಟನರ್ ಇಂಡಿಯಾ ಲೀಡರ್ಶಿಪ್ನ ಹರೀಶ್ ಎಚ್.ವಿ. ಹೇಳಿದ್ದಾರೆ.
ವ್ಯಾಪಾರ ಅಭಿವೃದ್ಧಿ ಸುಧಾರಣೆಯಿಂದ ಉದ್ಯೋಗ ಅವಕಾಶ ಕೂಡ ಜಾರಿಗೆ ತರಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.