ನವದೆಹಲಿ: ವ್ಯಾಪಾರ ಸಂಬಂಧಗಳ ವೃದ್ಧಿ ಹಾಗೂ ವಾಣಿಜ್ಯ ಮತ್ತು ವಲಸೆ ಸಮಸ್ಯೆಗಳನ್ನು ಪರಿಹರಿಸುವ ಗುರಿಯೊಂದಿಗೆ ಬ್ರಿಟನ್ ಪ್ರಧಾನಿ ತೆರೆಸಾ ಮೇ ಅವರು ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ.
ಭಾರತ ಮತ್ತು ಯುಕೆ ನಡುವೆ ವ್ಯಾಪಾರ ಮತ್ತು ಅವಕಾಶಗಳನ್ನು ಬಲಪಡಿಸಲು ಆಶಯ ವ್ಯಕ್ತಪಡಿಸಿದ ತೆರೆಸಾ ಮೇ, ಎರಡೂ ದೇಶಗಳು ‘ವಿಶೇಷ ಬಂಧ’ವನ್ನು ಹಂಚಿಕೊಂಡಿದೆ. ನಮ್ಮ ನಡುವೆ ನಿರೀಕ್ಷಿತ ಸಂಭಾವ್ಯ ಸಂಬಂಧವಿದೆ ಎಂದು ಹೇಳಿದ್ದಾರೆ.
ಬ್ರಿಟನ್ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಭಾರತದ ಹೂಡಿಕೆ ತಮ್ಮ ಆರ್ಥಿಕತೆಯ ವೈವಿಧ್ಯತೆಗೆ ಸಹಾಯಕವಾಗಿದೆ ಎಂದು ಹೇಳಿದ್ದಾರೆ.
ಭಾರತೀಯರ ಯುಕೆ ಪ್ರವಾಸ ಸುಗಮಗೊಳಿಸುವ ಬಗ್ಗೆ ಅವರು ಭರವಸೆ ನೀಡಿದ್ದಾರೆ. ಭಾರತೀಯರ ಪ್ರವಾಸಕ್ಕಾಗಿ ನೋಂದಾಯಿತ ಪ್ರಯಾಣ ಯೋಜನೆ ತರುವುದಾಗಿ ಅವರು ಹೇಳಿದ್ದಾರೆ.
ಯುಕೆಯ ವ್ಯಾಪಾರ ನಿಯೋಗದೊಂದಿಗೆ ದ್ವಿಪಕ್ಷೀಯ ಭೇಟಿಯ ಭಾಗವಾಗಿ ಭಾರತಕ್ಕೆ ಆಗಮಿಸಿರುವ ಮೇ, ಭಾರತ-ಯುಕೆ ನಡುವಿನ ಪಾಲುದಾರಿಕೆ ಬಗ್ಗೆ ವಿಶ್ಲೇಷಣೆ ನಡೆಸಲಿದ್ದಾರೆ.
ಅವರು ಬಳಿಕ ಆರ್ಥಿಕ ಮತ್ತು ವ್ಯಾಪಾರ ಸಮಿತಿಯ ಜಂಟಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
2014-15ರ ಭಾರತದ ಅಗ್ರ 25 ವಾಣಿಜ್ಯ ಪಾಲುದಾರರ ಪಟ್ಟಿಯಲ್ಲಿ ಬ್ರಿಟನ್ 18ನೇ ಸ್ಥಾನಷನ್ನು ಪಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.