ನವದೆಹಲಿ : ಹರ್ಯಾಣ ಮೂಲದ ನಿವೃತ್ತ ಯೋಧ ರಾಮ್ ಕಿಶನ್ ಗ್ರೆವಾಲ್ ಅವರು ದೆಹಲಿಯ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ಆತ್ಮಹತ್ಯೆಯಲ್ಲೂ ಕಾಂಗ್ರೆಸ್ ಮತ್ತು ಆಪ್ ಪಕ್ಷಗಳು ತಮ್ಮ ರಾಜಕೀಯವನ್ನು ತೋರಿಸಿವೆ. ಕೇಂದ್ರವನ್ನು ಹಳಿಯಲು ಏನೆಲ್ಲಾ ಮಾಡಬೇಕು ಅಷ್ಟು ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಒಆರ್ಒಪಿ ಯೋಜನೆ ಜಾರಿಗೊಳಿಸದೆ ಮೋದಿ ಸರ್ಕಾರ ಯೋಧರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿಲ್ಲ. ಯೋಜನೆ ಜಾರಿಯಾಗುವುದರಲ್ಲಿ ವಿಳಂಬವಾಗುತ್ತಿರುವುದರಿಂದ ಬೇಸತ್ತ ಯೋಧ ರಾಮ್ ಕಿಶನ್ ಗ್ರೆವಾಲ್ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ ಎಂದೆಲ್ಲಾ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿಗಳನ್ನೇ ಮಾಡಿದ್ದರು.
ನಿವೃತ್ತ ಯೋಧನ ಆತ್ಮಹತ್ಯೆಯ ಸಾವಿನಲ್ಲೂ ರಾಜಕೀಯವನ್ನು ಮಾಡಲು ಹೋಗಿ ರಾಹುಲ್ ಗಾಂಧಿ ಮತ್ತು ಕೇಜ್ರಿವಾಲ್ ಜೊತೆಗಾರರು ಬಂಧನಕ್ಕೊಳಗಾಗಿ ಮತ್ತೆ ಬಿಡಲ್ಪಟ್ಟರು. ಇಂಥವರು ಉರಿ ದಾಳಿಯಲ್ಲಿ ಹುತಾತ್ಮರಾದ ಯೋಧರ ಒಬ್ಬರ ಮನೆಗಾದರೂ ಹೋದದ್ದು ಇದೆಯೇ ? ಇದೀಗ ನಿವೃತ್ತ ಯೋಧ ಆತ್ಮಹತ್ಯೆ ಮಾಡಿಕೊಂಡಾಕ್ಷಣ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಮಾಧ್ಯಮಗಳೆದುರು ಫೋಸ್ ಕೊಡುತ್ತಿದ್ದಾರೆ.
ಓಆರ್ಒಪಿ ಯೋಜನೆಯಡಿ ಸುಮಾರು 1 ಲಕ್ಷ ಸೈನಿಕರು ಸಂಪೂರ್ಣ ಲಾಭ ಪಡೆಯಲಿದ್ದಾರೆ. ಕೆಲ ತಾಂತ್ರಿಕ ಕಾರಣಗಳಿಂದಾಗಿ ಈ ಯೋಜನೆಯನ್ನು ಸಂಪೂರ್ಣವಾಗಿ ಜಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಶೀಘ್ರದಲ್ಲೇ ಸಮಸ್ಯೆ ಪರಿಹಾರ ಮಾಡಲಾಗುವುದು. ಸರ್ಕಾರ ತನ್ನ ಹೇಳಿಕೆಗೆ ಬದ್ಧವಾಗಿದೆ. ಮೊದಲ ಕಂತಿನಲ್ಲಿ ಈಗಾಗಲೇ 5,500 ಕೋಟಿ ರೂ. ಬಿಡುಗಡೆ ಮಾಡಿದೆ. ಅದನ್ನು ನಿವೃತ್ತ ಯೋಧರಿಗೆ ಹಂಚಲಾಗುತ್ತಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ಕೆಲ ದಿನಗಳ ಹಿಂದೆ ಹೇಳಿದ್ದರು. ಇದೆಲ್ಲಾ ಗೊತ್ತಿದ್ದರೂ ರಾಹುಲ್ ಮತ್ತು ಕೇಜ್ರಿವಾಲ್ ಕೇಂದ್ರದ ಮೇಲೆ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.
ಇಷ್ಟೇ ಸಾಲದು ಎಂಬಂತೆ ರಾಹುಲ್ ಗಾಂಧಿ ಇನ್ನೂ ಮುಂದುವರೆದು, ನರೇಂದ್ರ ಮೋದಿಯವರು ದೇಶದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಯೋಧರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿ ಬರೀ ಸುಳ್ಳು ಹೇಳುತ್ತಾರೆ. ಒಆರ್ಒಪಿ ಯೋಜನೆ ಜಾರಿ ಮಾಡಿಯೇ ಇಲ್ಲ. ಪಿಂಚಣಿ ಹಣವನ್ನು ನೀಡಿ ಇದನ್ನೇ ಒಆರ್ಒಪಿ ಎಂದು ಸರ್ಕಾರ ಹೇಳುತ್ತಿದೆ ಎಂದು ಆರೋಪಿಸಿದ್ದಾರೆ. ಒಂದೊಮ್ಮೆ ಒಆರ್ಒಪಿ ಜಾರಿಯಾಗಿದ್ದಿದ್ದರೆ ಮಾಜಿ ಯೋಧರು ಏತಕ್ಕಾಗಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು ಎಂದು ಕೇಳಿದ್ದಾರೆ.
ದೇಶಕ್ಕಾಗಿ ಯೋಧರು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಹೋರಾಟ ನಡೆಸುತ್ತಿದ್ದಾರೆ, ಅವರಿಗೆ ನ್ಯಾಯ ಸಿಗಬೇಕು, ಅವರ ಹಕ್ಕು ಅವರಿಗೆ ನೀಡಬೇಕು. ತಕ್ಷಣವೇ ಸರ್ಕಾರ ಯೋಜನೆಯನ್ನು ಜಾರಿಗೆ ತರಬೇಕು. ಆತ್ಮಹತ್ಯೆ ಮಾಡಿಕೊಂಡ ಯೋಧನ ಕುಟುಂಬದವರ ಮೇಲೆ ಹಲ್ಲೆ ನಡೆಸಲಾಗಿದೆ. ಈ ರೀತಿ ಯಾವುದೇ ಸರ್ಕಾರ ನಡೆದುಕೊಂಡಿರಲಿಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಇಷ್ಟೆಲ್ಲಾ ಆರೋಪಗಳನ್ನು ಮಾಡುತ್ತಿರುವ ಇವರು ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಿದ್ದಾರೆಯೇ ? ತಮ್ಮ ರಾಜಕೀಯ ಹಿತಾಸಕ್ತಿಗೋಸ್ಕರ ಸಾವಿನಲ್ಲೂ ರಾಜಕೀಯ ಮಾಡಲು ಹೊರಟ ಇಂಥವರಿಗೆ ಏನನ್ನಬೇಕೋ ತಿಳಿಯುತ್ತಿಲ್ಲ.
ಆದರೆ ಟ್ವಿಟರ್ನಲ್ಲಿ RitaG74 ಎಂಬುವವರು ಒಂದು ಟ್ವೀಟ್ ಮಾಡಿದ್ದಾರೆ. ಇದನ್ನು ನೋಡಿದರೆ ಸಾಕು ಎಲ್ಲರಿಗೂ ವಾಸ್ತವಾಂಶದ ಅರಿವಾಗುತ್ತದೆ.
I’ll not let politicians politicise my husband’s 22 yrs of distinguished service in Army.
Here is d proof of OROP instalments paid by GoI. pic.twitter.com/uVuubbpUIZ— Rita (@RitaG74) November 3, 2016
My husband is getting around 72K as pension per month which by no means is less. But shame on these vultures doing politics over dead bodies
— Rita (@RitaG74) November 3, 2016
ರೀತಾ ಅವರು ತಮ್ಮ ಪತಿ 22 ವರ್ಷ ಸೇನೆಯಲ್ಲಿ ವಿಶೇಷ ಸೇವೆ ಸಲ್ಲಿಸಿದ್ದನ್ನು ರಾಜಕಾರಣಿಗಳು ರಾಜಕೀಯಕ್ಕಾಗಿ ಬಳಸಿಕೊಳ್ಳಲು ಬಿಡುವುದಿಲ್ಲ. ಒಆರ್ಒಪಿ ಯೋಜನೆ ಅನುಷ್ಠಾನದಿಂದ ದೊರೆಯುತ್ತಿರುವ ಹಣದ ವಿವರವೂ ಇಲ್ಲಿದೆ. ನನ್ನ ಪತಿಗೆ 72 ಸಾವಿರ ರೂ.ಗಳು ಪ್ರತಿ ತಿಂಗಳು ದೊರೆಯುತ್ತಿವೆ. ಇದೇನೂ ಕಡಿಮೆಯಲ್ಲ. ಆದರೆ ಸಾವಿನಲ್ಲೂ ರಾಜಕೀಯ ಮಾಡುತ್ತಿರುವವರಿಗೆ ನಾಚಿಕೆಯಾಗಬೇಕು ಎಂದು ಆವರು ಟ್ವೀಟ್ ಮಾಡಿದ್ದಾರೆ.
ಇವರ ಟ್ವೀಟ್ಗಳಿಗೆ ಪೂರಕವಾಗಿ ಕೆಲವರು ಮತ್ತಷ್ಟು ಟ್ವೀಟ್ ಮಾಡಿದ್ದಾರೆ. ಕೆಲವರು ಒಆರ್ಒಪಿ ಫಲಾನುಭವಿಗಳು ಒಗ್ಗೂಡಿ #OROPRecipient ಹ್ಯಾಷ್ಟ್ಯಾಗ್ನೊಂದಿಗೆ ಟ್ವೀಟ್ ಕ್ಯಾಂಪೇನ್ ಮಾಡಬೇಕು. ಆಗ ಸಾವಿನಲ್ಲೂ ರಾಜಕೀಯ ಮಾಡುವವರ ಕಣ್ಣುಗಳು ತೆರೆಯಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.