ಲಂಡನ್: ದೇಶದಲ್ಲಿ ಹೆಚ್ಚುತ್ತಿರುವ ವಲಸಿಗರನ್ನು ನಿಗ್ರಹಿಸಲು ಯುಕೆ ಸರ್ಕಾರ ಯೂರೋಪಿಯನ್ ಒಕ್ಕೂಟ ರಹಿತ ಪ್ರಜೆಗಳ ವೀಸಾ ನಿಯಮಗಳಲ್ಲಿ ಮಹತ್ತರ ಬದಲಾವಣೆ ಮಾಡುವುದಾಗಿ ಘೋಷಿಸಿದೆ. ಇದು ದೊಡ್ಡ ಸಂಖ್ಯೆಯಲ್ಲಿ ಭಾರತೀಯರು, ಅದರಲ್ಲೂ ವಿಶೇಷವಾಗಿ ಐಟಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ.
ಯುಕೆ ಗೃಹ ಕಚೇರಿ ಪ್ರಕಟಿಸಿದ ಹೊಸ ವೀಸಾ ನಿಯಮಗಳ ಪ್ರಕಾರ, ಆಂತರಿಕ ಕಂಪೆನಿ ವರ್ಗಾವಣೆ (ಐಸಿಟಿ) 2 ಟೈಯರ್ ಅಡಿಯಲ್ಲಿ ನವೆಂಬರ್ 24 ಅಥವಾ ಅದರ ನಂತರ ವೀಸಾ ಅರ್ಜಿ ಸಲ್ಲಿಸಿದಲ್ಲಿ ಅವರ ಸಂಬಳದ ಕನಿಷ್ಟ ಮಿತಿ ಈ ಹಿಂದಿನ 20,800 ಪೌಂಡ್ ಬದಲು 30,000 ಪೌಂಡ್ ಇರಬೇಕು.
ಬ್ರಿಟನ್ನಲ್ಲಿ ಆಂತರಿಕ ಕಂಪೆನಿ ವರ್ಗಾವಣೆ ನಿಯಮ ಮಾರ್ಗವನ್ನು ಭಾರತೀಯರು ಹೆಚ್ಚಾಗಿ ಬಳಸುತ್ತಿದ್ದು, ಶೇ.90ರಷ್ಟು ಭಾರತೀಯ ಐಟಿ ಉದ್ಯೋಗಿಗಳು ಈ ನಿಯಮದ ಅಡಿಯಲ್ಲಿ ವೀಸಾಗಳನ್ನು ಪಡೆಯುತ್ತಿದ್ದಾರೆ ಎಂದು ಯುಕೆಯ ವಲಸೆ ಸಲಹಾ ಸಮಿತಿ ಮಾಹಿತಿ ಪಡೆದಿದೆ.
ಯುಕೆ ಸರ್ಕಾರ ಘೋಷಿಸಿರುವ ಎರಡು ಹಂತಗಳ 2 ಟೈಯರ್ ನಿಯಮವನ್ನು ಸ್ವತಂತ್ರ ವಲಸೆ ಸಲಹಾ ಸಮಿತಿ ಪರಿಶೀಲಿಸಿದ್ದು, ಇದು ನವೆಂಬರ್ 24ರಿಂದ ಅನ್ವಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.