ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ 4 ಶ್ರೇಣಿಗಳ ದರಗಳನ್ನು ನಿರ್ಧರಿಸಲಾಗಿದೆ. ಇದು ಶೇ.5ರಿಂದ 28 ಇರಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ದೀರ್ಘಕಾಲದ ತೆರಿಗೆ ದರ ಮತ್ತು ವ್ಯವಸ್ಥೆಯನ್ನು ಕೊನೆಗೂ ಜಿಎಸ್ಟಿ ಮಂಡಳಿ ಒಪ್ಪಿಕೊಂಡಿದೆ. ಜಿಎಸ್ಟಿ ಮಂಡಳಿಯು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಇತರ ರಾಜ್ಯಗಳ ಹಣಕಾಸು ಸಚಿವರನ್ನು ಒಳಗೊಂಡಿದೆ.
ಹೊಸ ತೆರಿಗೆ ದರಕ್ಕೆ ಸಂಸತ್ತು ಅನುಮೋದನೆ ನೀಡಬೇಕಿದೆ. ವಿವಿಧ ಸರಕುಗಳ ಆಧಾರದಲ್ಲಿ ಜಿಎಸ್ಟಿಯ 4 ಶ್ರೇಣಿಗಳ ದರವನ್ನು 5, 12, 18 ಮತ್ತು 28 ಎಂದು ನಿರ್ಧರಿಸಲಾಗಿದೆ.
ಸರ್ಕಾರ ಈ ಹಿಂದೆ ಜಿಎಸ್ಟಿ ದರವನ್ನು 6,12, 18 ಮತ್ತು 26 ಎಂದು ನಿರ್ಧರಿಸಿತ್ತು. ಜಿಎಸ್ಟಿ ಮಂಡಳಿ ಮುಂದಿನ ಎಪ್ರಿಲ್ ತಿಂಗಳ ಒಳಗಾಗಿ ರಾಷ್ಟ್ರೀಯ ಮಾರಾಟ ತೆರಿಗೆ ಜಾರಿಗೆ ತರುವ ಯೋಜನೆಯನ್ನು ಸಭೆಯಲ್ಲಿ ಚರ್ಚಿಸಿದೆ.
ಜಿಎಸ್ಟಿ ಮಂಡಳಿ ತಂಬಾಕು ಉತ್ಪನ್ನಗಳು, ಪಾನೀಯಗಳು, ಪಾನ್ ಮಸಾಲಾ ಮುಂತಾದ ಉತ್ಪನ್ನಗಳ ಮೇಲೆ ಶೇ.28ಕ್ಕೂ ಹೆಚ್ಚಿನ ತೆರಿಗೆ ಅಳವಡಿಸಲು ಅನುಮೋದನೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.