ನವದೆಹಲಿ: ವಿಪತ್ತು ಅಪಾಯ ತಗ್ಗಿಸುವ ಕುರಿತು 10 ಅಂಶಗಳ ಕಾರ್ಯಸೂಚಿಯನ್ನು ವಿವರಿಸುತ್ತ, ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಅಭಿವೃದ್ಧಿ ವಲಯಗಳು ವಿಪತ್ತು ನಿರ್ವಹಣಾ ತತ್ವಗಳನ್ನು ಅಳವಡಿಸುವಂತೆ ಹೇಳಿದ್ದಾರೆ.
ಇದೇ ವೇಳೆ ವಿಪತ್ತು ಅಪಾಯ ನಿರ್ವಹಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಮತ್ತು ನಾಯಕತ್ವವನ್ನು ಪ್ರೋತ್ಸಾಹಿಸುವಂತೆ ಅವರು ಹೇಳಿದ್ದಾರೆ.
ದೆಹಲಿಯಲ್ಲಿ ವಿಪತ್ತು ಅಪಾಯ ತಗ್ಗಿಸುವಿಕೆಯ ಏಷ್ಯಾ ಮಂತ್ರಿಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, 2015 ಒಂದು ಸ್ಮರಣೀಯ ವರ್ಷವಾಗಿದೆ. ಸೆಂಡೈ ಚೌಕಟ್ಟು ರಚನೆ ಅಲ್ಲದೇ ಮಾನವೀಯತೆಯ ಭವಿಷ್ಯ ನಿರ್ಮಾಣಕ್ಕಾಗಿ ಅಂತಾರಾಷ್ಟ್ರೀಯ ಸಮುದಾಯ ಇನ್ನೂ ಎರಡು ಚೌಕಟ್ಟುಗಳಾದ ಸುಸ್ಥಿರ ಅಭಿವೃದ್ಧಿ ಗುರಿ ಮತ್ತು ಹವಾಮಾನ ಬದಲಾವಣೆಯಲ್ಲಿ ಪ್ಯಾರಿಸ್ ಒಪ್ಪಂದವನ್ನು ಮಾಡಲಾಗಿದೆ.
ಕಳೆದ ಎರಡು ದಶಕಗಳಲ್ಲಿ ವಿಶ್ವ ಅದರಲ್ಲೂ ಈ ಪ್ರದೇಶ ಹಲವು ಮಹತ್ತರ ಬದಲಾವಣೆಗಳನ್ನು ಕಂಡಿದೆ. ಅದರಲ್ಲೂ ಏಷ್ಯಾ-ಪೆಸಿಫಿಕ್ ಪ್ರದೇಶ ವಿವಿಧ ಕ್ಷೇತ್ರಗಳಲ್ಲಿ ಜಾಗತಿಕ ನಾಯತ್ವವನ್ನು ವಹಿಸಿದೆ.
ವಿಪತ್ತು ಅಪಾಯ ತಗ್ಗಿಸುವ ಕುರಿತ 10 ಅಂಶಗಳನ್ನು ವಿವರಿಸಿದ ಪ್ರಧಾನಿ ಮೋದಿ ಅವರು ಮೊದಲನೆಯದಾಗಿ ಎಲ್ಲ ಅಭಿವೃದ್ಧಿ ವಲಯಗಳು ವಿಪತ್ತು ನಿರ್ವಹಣಾ ತತ್ವಗಳನ್ನು ಅಳವಡಿಸಬೇಕು. ಎರಡನೆಯದಾಗಿ ವಿಪತ್ತು ಅಪಾಯ ನಿರ್ವಹಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಮತ್ತು ನಾಯಕತ್ವವನ್ನು ಪ್ರೋತ್ಸಾಹಿಸಬೇಕು. ಮೂರನೆಯದಾಗಿ ಬಡ ಕುಟುಂಬಗಳು, ಎಸ್ಎಂಇ, ಬಹುರಾಷ್ಟ್ರೀಯ ಕಾರ್ಪೋರೇಶನ್ಗಳು ಮತ್ತು ಎಲ್ಲ ರಾಜ್ಯಗಳು ವಿಪತ್ತು ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಬೇಕು.
ವಿಪತ್ತು ಅಪಾಯ ಮಾಪನದಲ್ಲಿ ಜಾಗತಿಕವಾಗಿ ಹೂಡಿಕೆ ಮಾಡುವುದು. ಭೂಕಂಪ ಮುಂತಾದ ಅಪಾಯಗಳ ಮಾಪನದಲ್ಲಿ ಕೆಲವು ಗುಣಮಟ್ಟದ ನಿಯಮ ಮತ್ತು ನಿಯತಾಂಕಗಳನ್ನು ಅಳವಡಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ.
ಕಳೆದ 25 ವರ್ಷಗಳ ಹಿಂದೆ ಏಷ್ಯಾದ ಕೆಲವೇ ರಾಷ್ಟ್ರಗಳು ವಿಪತ್ತು ನಿರ್ವಹಣಾ ಸಂಸ್ಥೆಗಳನ್ನು ಹೊಂದಿದ್ದವು. ಭಾರತ ಪ್ರಸ್ತುತ ಸುನಾಮಿ ಎಚ್ಚರಿಕೆ ವ್ಯವಸ್ಥೆಯನ್ನು ಹೊಂದಿದ್ದು, ಇದು ಅಪಾಯದ ಮುನ್ಸೂಚನೆ ಮತ್ತು ಎಚ್ಚರಿಕೆ ನೀಡಲಿದೆ ಎಂದು ಅವರು ಹೇಳಿದ್ದಾರೆ.
ನವೆಂಬರ್ 5ನ್ನು ಭಾರತ ಮೊದಲ ಅಂತಾರಾಷ್ಟ್ರೀಯ ಸುನಾಮಿ ಜಾಗೃತಿ ದಿನವನ್ನಾಗಿ ಆಚರಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.