ನವದೆಹಲಿ: ಟೆಲಿಕಾಂ ಆಯೋಜಕ ರಿಲಯನ್ಸ್ ಜಿಯೋ ಇನ್ಫೋಕಾಂ (ಆರ್ಜೆಐಎಲ್) ತನ್ನ 4G ನೆಟ್ವರ್ಕ್ ಅಭಿವೃದ್ಧಿಪಡಿಸಲು ಮುಂದಿನ 6 ತಿಂಗಳುಗಳಲ್ಲಿ 45,000 ಮೊಬೈಲ್ ಟವರ್ಗಳನ್ನು ಸ್ಥಾಪಿಸಲಿದೆ.
ಟೆಲಿಕಾಂ ಸಚಿವ ಮನೋಜ್ ಸಿನ್ಹಾ ಜೊತೆ ನಡೆಸಿದ ಸಭೆ ವೇಳೆ ರಿಲಯನ್ಸ್ ಜಿಯೋ ಈ ಬಗ್ಗೆ ತಿಳಿಸಿದ್ದು, ಮುಂದಿನ 4 ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆ ಮಾಡುವ ಯೋಜನೆ ಇದೆ ಎಂದು ಕಂಪೆನಿ ತಿಳಿಸಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.
ಆರ್ಜೆಐಎಲ್ ಈಗಾಗಲೇ 1.6 ಲಕ್ಷ ಕೋಟಿ ರೂ. ಹೂಡಿಕೆ ಮಾಡುವ ಮೂಲಕ ದೇಶದಾದ್ಯಂತ ೧೮,೦೦೦ ನಗರಗಳು ಹಾಗೂ ೨ ಲಕ್ಷ ಗ್ರಾಮಗಳಲ್ಲಿ ಈಗಾಗಲೇ 2.82 ಲಕ್ಷ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಜಿಯೋ ತನ್ನ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಪ್ರಯತ್ನಿಸುತ್ತಿದೆ. ಏರ್ಟೆಲ್, ವೊಡಾಫೊನ್ ಮತ್ತು ಐಡಿಯಾದಿಂದ ಪರಸ್ಪರ ಸಂಪರ್ಕ ದೊರಕದೇ ಇದ್ದು, ಕರೆ ವೈಫಲ್ಯಕ್ಕೆ ಕಾರಣವಾಗಿದೆ ಎಂದು ಹೇಳಿದೆ.
ಕಂಪೆನಿಗಳ ನಡುವಿನ ಪರಸ್ಪರ ಸಂಪರ್ಕ ಸಮಸ್ಯೆ ಶೀಘ್ರದಲ್ಲೇ ನಿವಾರಿಸುವಂತೆ ಸಚಿವ ಸಿನ್ಹಾ ನಿರ್ದೇಶಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.