ಲಖ್ನೌ: 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ‘ವಿಕಾಸ್ ರಥ ಯಾತ್ರೆ’ ಚುನಾವಣಾ ಪ್ರಚಾರವನ್ನು ಗುರುವಾರದಿಂದ ಆರಂಭಿಸಲಿದ್ದಾರೆ.
ಅಖಿಲೇಶ್ ಯಾದವ್ ರಥ ಯಾತ್ರೆ ರಾಜ್ಯಾದ್ಯಂತ ಸಂಚರಿಸಲಿದ್ದು, ಯುವಕರು, ಮಹಿಳೆಯರು, ರೈತರು, ಅಲ್ಪಸಂಖ್ಯಾತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೊದಲ ದಿನದ ಯಾತ್ರೆಯ ಭಾಗವಾಗಿ ಅಖಿಲೇಶ್ ಯಾದವ್ ಲಖ್ನೌ ಹಾಗೂ ಉನ್ನಾವೋ ನಡುವೆ 75 ಕಿ.ಮೀ. ಸಂಚರಿಸಲಿದ್ದಾರೆ.
ಅತ್ಯಾಧುನಿಕ ಮರ್ಸಿಡಿಸ್ ಬಸ್ನಲ್ಲಿ ರಥಯಾತ್ರೆಯನ್ನು ಆರಂಭಿಸಲಿದ್ದಾರೆ. ಇದು ಹೈಡ್ರಾಲಿಕ್ ಲಿಫ್ಟ್ ವ್ಯವಸ್ಥೆಯನ್ನು ಹೊಂದಿದೆ. ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರಿಗೆ ಅಖಿಲೇಶ್ ಭಾವಚಿತ್ರ ಇರುವ ಟಿ-ಶರ್ಟ್, ಪಕ್ಷದ ಚಿಹ್ನೆ ಇರುವ ಕ್ಯಾಪ್ಗಳನ್ನು ಈಗಾಗಲೇ ವಿತರಿಸಲಾಗಿದೆ.
ಅಖಿಲೇಶ್ರ ಆಪ್ತ ಸುನಿಲ್ ಸಿಂಗ್ ಸಾಜನ್ ನೇತೃತ್ವದಲ್ಲಿ ರಥ ಯಾತ್ರೆ ನಡೆಯಲಿದೆ.
ಪಕ್ಷದಲ್ಲಿಯ ರಾಜಕೀಯ ವಿಚಾರವಾಗಿ ಯಾದವ್ ಕುಟುಂಬದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಗೊಂದಲಗಳು ಮೂಡಿ ಬಂದಿದ್ದರೂ ರಥ ಯಾತ್ರೆಗೆ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಹಾಗೂ ಅವರ ಸೋದರ ಶಿವಪಾಲ್ ಯಾದವ್ ಆಗಮಿಸಲಿದ್ದಾರೆ ಹಾಗೂ ಮುಲಾಯಂ ಸಿಂಗ್ ರಥ ಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ರಥ ಯಾತ್ರೆಯ ಆರಂಭಕ್ಕೂ ಮುನ್ನ ಕಾರ್ಯಕ್ರಮಕ್ಕೆ ಆಗಮಿಸಿದ್ದಕ್ಕಾಗಿ ಅಖಿಲೇಶ್ ಯಾದವ್ ತಮ್ಮ ತಂದೆ ಪಕ್ಷದ ಮುಖಂಡ ಮುಲಾಯಂ ಸಿಂಗ್ ಹಾಗೂ ಶಿವಪಾಲ್ ಯಾದವ್ ಅವರಿಗೆ ಧನ್ಯವಾದ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.