ಮುಂಬಯಿ: ಪಾಕಿಸ್ಥಾನದಿಂದ ಸ್ವಾತಂತ್ರ್ಯ ಪಡೆಯಲು ಹೋರಾಡುತ್ತಿರುವ ತಮ್ಮ ಜನರಿಗೆ ಭಾರತದ ಈ ಹಿಂದಿನ ಸರ್ಕಾರಗಳು ನಿರಾಶೆ ಮೂಡಿಸಿವೆ. ಆದರೆ ತಮ್ಮ ಹೋರಾಟಕ್ಕೆ ನೈತಿಕ ಬೆಂಬಲ ಸೂಚಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಲೂಚ್ ನಾಯಕಿ ನಯೀಮಾ ಕಾದ್ರಿ ಬಲೂಚ್ ಧನ್ಯವಾದ ಹೇಳಿದ್ದಾರೆ.
ಭಾರತದ ಈ ಹಿಂದಿನ ಸರ್ಕಾರಗಳು ನಿರಾಶೆ ಮೂಡಿಸಿವೆ. ಆದರೆ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರು ಬಲೂಚಿಸ್ಥಾನದ ಸ್ವಾತಂತ್ರ್ಯ ಹೋರಾಟಕ್ಕೆ ನೈತಿಕ ಬೆಂಬಲ ಸೂಚಿಸಿದ್ದು, ಅವರಿಗೆ ನನ್ನ ಧನ್ಯವಾದ ಎಂದು ನಯೀಮಾ ಹೇಳಿದ್ದಾರೆ.
ನಾವು ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟ ಸೇಋಇದಂತೆ ಎಲ್ಲ ರೀತಿಯ ಹೋರಾಟ ನಡೆಸುತ್ತಿದ್ದೇವೆ. ಪಾಕಿಸ್ಥಾನ ಬಲೂಚ್ರ ವಿರುದ್ಧ ರಾಸಾಯನಿಕ ಶಸ್ತ್ರಾಸ್ತ್ರ ಬಳಸುತ್ತಿದ್ದು, ಮಕ್ಕಳ ಹತ್ಯೆ ಹಾಗೂ ಮಹಿಳೆಯರ ಅಪಹರಣ ನಡೆಸುತ್ತಿತ್ತು ಎಂದು ಕಾದ್ರಿ ಬಲೂಚ್ ಆರೋಪಿಸಿದ್ದಾರೆ.
ಮೂಲಸೌಕರ್ಯ ಯೋಜನೆಗಳ ಅಭಿವೃದ್ಧಿಗೆ ಬಲೂಚಿಸ್ಥಾನದ ಒಳಗೆ ಚೀನಾದ ಪ್ರವೇಶದಿಂದ ದೌರ್ಜನ್ಯ ಹೆಚ್ಚಿತು. ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ವಿದೇಶಗಳಿಂದ ಪಡೆಯುತ್ತಿದ್ದ ಹಣದಿಂದ ಬಲೂಚಿಸ್ಥಾನದಲ್ಲಿ ಭಯೋತ್ಪಾದನೆಯ ಪೋಷಣೆ ಮಾಡುತ್ತಿದೆ ಎಂದು ಕಾದ್ರಿ ಆರೋಪಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.