ನವದೆಹಲಿ : ಇಸಿಸ್ ಸಂಘಟನೆ ಭಾರತದಲ್ಲಿರುವ ವಿದೇಶಿಗರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಧ್ಯತೆಗಳಿವೆ ಎಂಬ ಹಿನ್ನಲೆಯಲ್ಲಿ ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಎಚ್ಚರಿಕೆಯಿಂದಿರಲು ಸೂಚನೆ ನೀಡಿದೆ.
ಇಸಿಸ್ ಸಂಘಟನೆಯ ಉಗ್ರರು ಹೆಚ್ಚು ಜನರಿರುವಂತಹ ಧಾರ್ಮಿಕ ಪ್ರದೇಶಗಳು, ಹಬ್ಬಗಳು ನಡೆಯುವ ಸಂದರ್ಭ, ಮಾರುಕಟ್ಟೆ ಪ್ರದೇಶ, ಹೀಗೆ ಕೆಲವು ಪ್ರದೇಶಗಳಲ್ಲಿ ವಿದೇಶಿಗರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಧ್ಯತೆಗಳಿವೆ. ಇಂತಹ ಸ್ಥಳಗಳಿಂದ ಅಮೇರಿಕಾದ ನಾಗರಿಕರು ದೂರವಿರಬೇಕು. ಗರಿಷ್ಠ ಪ್ರಮಾಣದ ಎಚ್ಚರಿಕೆಯನ್ನು ಕಾಯ್ದುಕೊಳ್ಳಬೇಕು ಎಂದು ನವದೆಹಲಿಯಲ್ಲಿರುವ ಅಮೇರಿಕಾದ ರಾಯಭಾರ ಕಚೇರಿ ಮಂಗಳವಾರ ರಾತ್ರಿ ತುರ್ತು ಸಂದೇಶವನ್ನು ರವಾನಿಸಿದೆ.
ಅಮೇರಿಕಾದ ಗುಪ್ತಚರ ಅಧಿಕಾರಿಗಳ ಪ್ರಕಾರ ಇಸಿಸ್ ತನ್ನ ಅಂಗ ಸಂಸ್ಥೆಯಾದ ಐಎಸ್ ಐಎಲ್ ಅಥವಾ ಇಸಿಲ್ ಅಕಾ ಡಾಯಿಷ್ ಉಗ್ರ ಸಂಘಟನೆಗಳಿಂದ ಪಾಕಿಸ್ಥಾನ ಮೂಲದ ಜೈಶ್-ಇ-ಮೊಹಮ್ಮದ್, ಇಂಡಿಯನ್ ಮುಜಾಹಿದ್ದೀನ್ ಹಾಗೂ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗಳ ನೆರವಿನಿಂದ ಭಾರತದಲ್ಲಿ ದಾಳಿಗಳನ್ನು ನಡೆಸುವ ಸಾಧ್ಯತೆಗಳಿವೆ ಎಂದು ವರದಿಯಲ್ಲಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.