ನವದೆಹಲಿ: ಕಳೆದ ಒಂದು ದಶಕದಲ್ಲಿ 5-19 ವರ್ಷದೊಳಗಿನ 6.54 ಕೋಟಿ ಭಾರತೀಯರು ಶಾಲಾ ಶಿಕ್ಷಣದಿಂದ ದೂರ ಉಳಿದಿದ್ದಾರೆ. ಇನ್ನು 4.49 ಕೋಟಿ ಭಾರತೀಯರು ಶಾಲೆಗಳನ್ನು ತೊರೆದಿದ್ದಾರೆ.
2011ರ ಜನಗಣತಿ ವರದಿ ಪ್ರಕಾರ, 5-19 ವರ್ಷದೊಳಗಿನ 38.01 ಕೋಟಿ ಭಾರತೀಯರಲ್ಲಿ 26.98 ಕೋಟಿ (ಶೇ.71), ಶಿಕ್ಷಣ ಪಡೆಯುತ್ತಿದ್ದರೆ, 4.49 ಕೋಟಿ (ಶೇ.11.9) ಜನರು ಅರ್ಧದಲ್ಲೇ ಶಾಲಾ ಶಿಕ್ಷಣವನ್ನು ಮೊಟಕುಗೊಳಿಸಿದ್ದಾರೆ. ಇನ್ನುಳಿದ 6.54 ಕೋಟಿ (ಶೇ.17.2) ಮಂದಿ ಜನರು ಶಾಲೆಗೆ ತೆರಳಿಲ್ಲ.
2011ರ ಜನಗಣತಿ ವರದಿ ಪ್ರಕಾರ 5-19 ವರ್ಷದೊಳಗಿನ 65.7 ಲಕ್ಷ ದಿವ್ಯಾಂಗ ಜನರ ಪೈಕಿ 17.5 ಲಕ್ಷ ಜನರು (ಶೇ.26.5) ಶಾಲಾ ಶಿಕ್ಷಣ ಪಡೆದಿಲ್ಲ. 40.2 ಲಕ್ಷ (ಶೇ. 61.2) ಜನರು ಶಾಲಾ ಶಿಕ್ಷಣ ಪಡೆಯುತ್ತಿದ್ದರೆ ಇನ್ನುಳಿದ 8 ಲಕ್ಷ ಜನರು (ಶೇ.12.1) ಅರ್ಧದಲ್ಲೇ ಶಾಲೆ ಬಿಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.