ನವದೆಹಲಿ: ಸಿಎನ್ಜಿ ಇಂಧನವನ್ನು ವಾಹನಗಳಿಗೆ ಮುಖ್ಯ ಇಂಧನವಾಗಿ ಬಳಸುವ ನೀತಿಯ ಕುರಿತು ಸ್ಪಷ್ಟಪಡಿಸುವಂತೆ 5 ರಾಜ್ಯಗಳಾದ ಉತ್ತರ ಪ್ರದೇಶ, ಹರ್ಯಾಣ, ದೆಹಲಿ, ರಾಜಸ್ಥಾನ ಮತ್ತು ಪಂಜಾಬ್ ರಾಜ್ಯಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನಿರ್ದೇಶಿಸಿದೆ.
ಎಲ್ಲ ರಾಜ್ಯಗಳು ಸಿಎನ್ಜಿ ಪೂರೈಕೆ ಮತ್ತು ವಿತರಣೆ ಮೂಲಸೌಕರ್ಯದ ಕುರಿತು ಸ್ಪಷ್ಟಪಡಿಸಬೇಕು ಎಂದು ಅದು ಹೇಳೀದೆ.
ಅಲ್ಲದೇ ಸಿಎನ್ಜಿ ಹಾಗೂ ಪಿಎನ್ಜಿ ಅನಿಲ ವಿತರಣಾ ಪೈಪ್ಲೈನ್ ಅಳವಡಿಕೆ ಯೋಜನೆಯ ವಿಸ್ತೃತ ಮಾಹಿತಿ ಒದಗಿಸುವಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (ಪಿಎನ್ಜಿಆರ್ಬಿ)ಗೆ ಎನ್ಜಿಟಿ ನಿರ್ದೇಶಿಸಿದೆ.
ಈ 5 ರಾಜ್ಯಗಳಲ್ಲಿ ಸಿಎನ್ಜಿ ಮತ್ತು ಪಿಎನ್ಜಿ ಪೂರೈಕೆಯಾಗಲಿರುವ ನಗರಗಳು, ಪ್ರಸ್ತುತ ಸಿಎನ್ಜಿ ಬಳಕೆಯ ವಿವರಗಳನ್ನು ಪಿಎನ್ಜಿಆರ್ಬಿ ಸ್ಪಷ್ಟಪಡಿಸುವಂತೆ ಎನ್ಜಿಟಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.