ನವದೆಹಲಿ: ಎಪ್ರಿಲ್ ತಿಂಗಳಿನಲ್ಲಿ ರಾಷ್ಟ್ರವ್ಯಾಪಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪರಿಚಯಿಸುವ ಕೇಂದ್ರ ಸರ್ಕಾರದ ಯೋಜನೆಯೊಂದಿಗೆ ಹೊಸ ನಿಯಮಗಳನ್ನು ಸೇರಿಸಲು ಮಂಗಳವಾರ ನಡೆದ ನಿರ್ಣಾಯಕ ಸಭೆ ಯಾವುದೇ ಮೂಲಭೂತ ಬದಲಾವಣೆಗಳಿಲ್ಲದೇ ಕೊನೆಗೊಂಡಿದೆ.
ತೆರಿಗೆ ಪಾವತಿ ಅಡಿಯಲ್ಲಿ ಬರುವ ಶೇ.20ರಿಂದ 25 ಐಶಾರಾಮಿ ಶ್ರೇಣಿಯ ವಸ್ತುಗಳ ಮೇಲೆ ಪ್ರಸ್ತುತ ಇರುವ ಶೇ. 31ರಷ್ಟು ಅತ್ಯಧಿಕ ತೆರಿಗೆಯನ್ನು ಶೇ.26ಕ್ಕೆ ಇಳಿಸಲು ಚಿಂತಿಸಲಾಗಿದೆ. ಇತರ ಶ್ರೇಣಿಗೆ ಶೇ.18, 12 ಮತ್ತು ಶೇ.6ರಷ್ಟು ತೆರಿಗೆಯನ್ನು ಜಾರಿಗೊಳಿಸಲು ಚಿಂತಿಸಲಾಗುತ್ತಿದೆ. ಅಗತ್ಯ ವಸ್ತುಗಳಾದ ಆಹಾರ ಮತ್ತು ವೇಗವಾಗಿ ಮಾರಾಟವಾಗುವ ಗ್ರಾಹಕ ವಸ್ತುಗಳ ಮೇಲೆ ಶೇ.12 ಮತ್ತು ಅಮೂಲ್ಯ ಲೋಹಗಳಾದ ಚಿನ್ನ, ಬೆಳ್ಳಿ ಮತ್ತಿತರ ವಸ್ತುಗಳ ಮೇಲೆ ಶೇ.6ರಷ್ಟು ತೆರಿಗೆಯನ್ನು ಜಾರಿಗೊಳಿಸುವ 4 ವಿವಿಧ ಶ್ರೇಣಿಗಳ ಜಿಎಸ್ಟಿಯನ್ನು ಹಣಕಾಸು ಸಚಿವಾಲಯ ಪ್ರಸ್ತಾಪಿಸಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ವ್ಯವಸ್ಥೆಯನ್ನು ಒಗ್ಗೂಡಿಸುವ ಏಕೈಕ ತೆರಿಗೆ ಸುಧಾರಣೆ ಜಿಎಸ್ಟಿನ್ನು ೩ ದಿನಗಳ ಸಭೆಯಲ್ಲಿ ರಾಜ್ಯ ಸರ್ಕಾರಗಳೊಂದಿಗೆ ಅಂತಿಮ ಒಪ್ಪಂದದ ಬಳಿಕ ಸಂಸತ್ನಲ್ಲಿ ಮುಂದಿನ ತಿಂಗಳು ಮಂಡಿಸಲು ಹಣಕಾಸು ಸಚಿವ ಅರುಣ್ ಜೇಟ್ಲಿ ಮುಂದಾಗಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕನಿಷ್ಠ ಆದಾಯ ಬಾದ್ಯತೆಗಳೊಂದಿಗೆ ತೆರಿಗೆ ಪಾವತಿದಾರರ ಮೇಲೆ ಒತ್ತಡ ಹೇರದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊಂದಿದೆ ಎಂದು ಸಚಿವ ಜೇಟ್ಲಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.