ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಪ್ರದೇಶದಲ್ಲಿ ಮಂಗಳವಾರ ಭಯೋತ್ಪಾದಕರ ಅಡಗುತಾಣಗಳ ಮೇಲೆ ಭದ್ರತಾ ಪಡೆಗಳು ದಾಳಿ ಮಾಡಿದೆ.
ಬಾಂಬ್ಗಳು, ಚೀನಾ ಮತ್ತು ಪಾಕಿಸ್ಥಾನದ ಧ್ವಜಗಳಲ್ಲದೇ ಪಾಕಿಸ್ಥಾನ ಮೂಲದ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗಳ ಶೀರ್ಷಿಕೆಗಳನ್ನು ಭದ್ರಾತಾ ಪಡೆಗಳು ವಶಪಡಿಸಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.
ಈ ವೇಳೆ ಭಯೋತ್ಪಾದನೆ ಸಂಭಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಆಪಾದನೆ ಹೊತ್ತಿರುವ 44 ಜನರನ್ನು ಬಂಧಿಸಲಾಗಿದೆ.
‘ಬಾರಾಮುಲ್ಲಾ ಪ್ರದೇಶದ ಹಳೆಯ ಪಟ್ಟಣದಲ್ಲಿ 12 ಗಂಟೆಗಳ ಕಾಲ ನಡೆದ ಶೋಧ ಕಾರ್ಯಾಚರಣೆಯ ವೇಳೆಯಲ್ಲಿ 700ಕ್ಕೂ ಹೆಚ್ಚು ಮನೆಗಳಲ್ಲಿ ಭಯೋತ್ಪಾದಕ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ 44 ಜನರನ್ನು ಸೆರೆಹಿಡಿಯಲಾಗಿದೆ’ ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ.
ಭಾರಿ ಪ್ರಮಾಣದ ಸ್ಪೋಟಕ ವಸ್ತುಗಳು, ಪೆಟ್ರೋಲ್ ಬಾಂಬ್ ಹಾಗೂ ಚೀನಾ, ಪಾಕಿಸ್ಥಾನ ಧ್ವಜಗಳು, ಎಲ್ಇಟಿ ಮತ್ತು ಜೆಇಮ್ ಸಂಘಟನೆಗಳ ಕರಪತ್ರಗಳು, ನಿಷೇಧಿತ ಮೊಬೈಲ್ ಫೋನ್ ಮತ್ತು ರಾಷ್ಟ್ರ ವಿರೋಧಿ ಪ್ರಚಾರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾ ವಕ್ತಾರರು ಹೇಳಿದ್ದಾರೆ.
‘ಈ ಕಾರ್ಯಾಚರಣೆಯು ಸೇನೆ, ಪೊಲೀಸ್, ಬಿಎಸ್ಎಫ್ ಮತ್ತು ಸಿಆರ್ಪಿಎಫ್ ತಂಡಗಳು ಕಾಸಿ ಹಮಾಮ್, ಜನಾಯ್ ಹಮಾಮ್, ತಾವೇದ್ ಗಂಜ್ ಮತ್ತಿತರ ಪ್ರದೇಶಗಳಲ್ಲಿ ಜಂಟಿಯಾಗಿ ನಡೆಸಿವೆ ಎಂದು ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.