ನವದೆಹಲಿ: ದೇಶೀಯ ಪರಮಾಣು ಜಲಾಂತರ್ಗಾಮಿ ‘ಐಎನ್ಎಸ್ ಅರಿಹಂತ್’ ಆಗಸ್ಟ್ನಲ್ಲಿ ನಿಯೋಜಿಸಲಾಗಿದ್ದು, ಕಾರ್ಯಾರಂಭಿಸಿದೆ ಎಂದು ತಡವಾಗಿ ತಿಳಿದು ಬಂದಿದೆ.
೬೦೦೦ ಟನ್ ತೂಕದ ಜಲಾಂತರ್ಗಾಮಿ ನೌಕೆ ಸೇವೆ ಆರಂಭಿಸುವ ಮೂಲಕ ಭಾರತದ ತ್ರಿವಳಿ ಪರಮಾಣು ನೌಕಾ ಯೋಜನೆ ಪೂರ್ಣಗೊಳಿಸಿದಂತಾಗಿದೆ ಎಂದು ದೈನಿಕವೊಂದು ವರದಿ ಮಾಡಿದೆ.
ನೌಕಾ ದಳದ ಮುಖ್ಯಸ್ಥ ಸುನಿಲ್ ಲಾಂಬಾ ಆಗಸ್ಟ್ನಲ್ಲಿ ಐಎನ್ಎಸ್ ಅರಿಹಂತ್ ನಿಯೋಜಿಸಿದ್ದು, ಇದರ ಸೇರ್ಪಡೆಯೊಂದಿಗೆ ಸಮುದ್ರ, ವಾಯು ಮತ್ತು ಭೂ ಪ್ರದೇಶದಲ್ಲಿ ಪರಮಾಣು ದಾಳಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯ ಹೊಂದಿದ ತ್ರಿವಳಿ ನೌಕೆ ಪಡೆದಂತಾಗಿದೆ.
ಐಎನ್ಎಸ್ ಅರಿಹಂತ್ ಭಾರತದ ಪ್ರಥಮ ಸ್ವದೇಶಿ ಪರಮಾಣು ನೌಕೆಯಾಗಿದ್ದು, ಅರಿಹಂತ್ ವರ್ಗದ ಪರಮಾಣು ಶಕ್ತಿಯ ಕ್ಷಿಪಣಿ ಜಲಾಂತರ್ಗಾಮಿ ನೌಕೆಯ ಪ್ರಮುಖ ಹಡಗು ಇದಾಗಿದೆ.
ಜಲಾಂತರ್ಗಾಮಿ ನೌಕೆಯನ್ನು ರಷ್ಯಾದ ಅಕುಲಾ-1ಕ್ಲಾಸ್ ಆಧರಿಸಿ ವಿನ್ಯಾಸಗೊಳಿಸಲಾಗಿದ್ದು, ಅದರ 83 ಮೆಗಾವ್ಯಾಟ್ ನೀರಿನ ಒತ್ತಡ ರಿಯಾಕ್ಟರ್ ರಷ್ಯಾದ ನೆರವಿನೊಂದಿಗೆ ನಿರ್ಮಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.