ನವದೆಹಲಿ: ಭಾರತದಲ್ಲಿ ಪಾಕಿಸ್ಥಾನ ಮೂಲದ ಕಲಾವಿದರು ಮತ್ತು ತಂತ್ರಜ್ಞರ ನಿಷೇಧ ವಿವಾವದದ ಮಧ್ಯೆ ಮುಂಬಯಿ ಅಕಾಡೆಮಿ ಆಫ್ ಮೂವಿಂಗ್ ಇಮೇಜ್ (MAMI) ಸಂಸ್ಥೆಯು ಪಾಕ್ ಚಿತ್ರಗಳನ್ನು ಬಹಿಷ್ಕರಿಸಲು ನಿರ್ಧರಿಸಿದೆ ಎಂದು ವರದಿ ತಿಳಿಸಿದೆ.
ಈ ವರ್ಷದ ಮುಂಬಯಿ ಚಲನಚಿತ್ರೋತ್ಸವದಲ್ಲಿ ಪಾಕಿಸ್ಥಾನದ ಯಾವುದೇ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದಿಲ್ಲ ಎಂದು ವರದಿ ಮಾಡಿದೆ.
ವರದಿಯ ಪ್ರಕಾರ ರವಿವಾರದಂದು ನಗರದ ಸಾಮಾಜಿಕ ಸಂಘಟನೆಯೊಂದು, ಮುಂಬರುವ ಚಲಚಿತ್ರೋತ್ಸವ ಕಾರ್ಯಕ್ರಮದಲ್ಲಿ ಪಾಕಿಸ್ಥಾನಿ ಚಿತ್ರದ ಪ್ರದರ್ಶನಕ್ಕೆ ಮುಂದಾಗಿದ್ದು, ಮುಂಬಯಿ ಚಲನಚಿತ್ರೋತ್ಸವದ ಸಂಘಟಕರಿಗೆ ಸಮಸ್ಯೆನ್ನುಂಟು ಮಾಡಿದೆ. ಅದು MAMI ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ ಎಂದು ವರದಿಯಾಗಿದೆ.
ಸಂಘರ್ಷ್ ಎಂಬ ಸಂಘಟನೆ MAMIಯ ಸಂಘಟಕರು ಭಾರತೀಯರ ರಾಷ್ಟ್ರೀಯತಾವಾದಿ ಭಾವನೆಗಳೊಂದಿಗೆ ಆಟವಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಚಲನಚಿತ್ರೋತ್ಸವದ (MAMI) 18ನೇ ಆವೃತ್ತಿ ಅಕ್ಟೋಬರ್ 20 ರಿಂದ 27 ರ ವರೆಗೆ ನಡೆಯಲಿದ್ದು, 54 ದೇಶಗಳ ಸುಮಾರು 180 ಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.