ಪಣಜಿ: ಪಾಕಿಸ್ಥಾನದೊಂದಿಗೆ ಯಾವುದೇ ಸೇನಾ ಸಂಬಂಧಿತ ವ್ಯವಹಾರ ಅಥವಾ ಒಪ್ಪಂದಗಳನ್ನು ರಷ್ಯಾ ಮಾಡಿಕೊಂಡಿಲ್ಲ ಅಥವಾ ಮಾಡುವ ಚಿಂತನೆ ನಡೆಸಿಲ್ಲ ಎಂದು ರಷ್ಯಾದ ಆರ್ಒಎಸ್ಟಿಇಸಿ ಕಾರ್ಪ್ನ ಸಿಇಓ ಸೆರ್ಜೇ ಕೆಮೆಝೋವ್ ತಿಳಿಸಿದ್ದಾರೆ.
‘ನಾವು ಯಾವುದೇ ರೀತಿಯ ಆಧುನಿಕ ವಿಮಾನ ಮತ್ತು ಸೇನಾ ವಿಮಾನಗಳನ್ನು ಪಾಕಿಸ್ಥಾನಕ್ಕೆ ನೀಡುತ್ತಿಲ್ಲ. ಮೊದಲಿನ ಒಪ್ಪಂದದ ಮೇರೆಗೆ ನಾವು ಹೆಲಿಕಾಪ್ಟರ್ಗಳನ್ನು ನೀಡಿದ್ದೇವೆ, ಮತ್ತು ಅವುಗಳು ಕೇವಲ ಸಾರಿಗೆಗೆ ಸೀಮಿತವಾಗಿವೆ’ ಎಂದು ಸುದ್ದಿ ಸಂಸ್ಥೆ ಎಎನ್ಐ ನಲ್ಲಿ ಉಲ್ಲೇಖಿಸಿರುವಂತೆ ಸೆರ್ಜೇ ಕೆಮೆಝೋವ್ ಹೇಳಿದ್ದಾರೆ.
ಈ ವರ್ಷದ ಸೆಪ್ಟೆಂಬರ್ನಲ್ಲಿ ನಡೆದ ರಷ್ಯಾ-ಪಾಕಿಸ್ಥಾನ ಜಂಟಿ ಸೇನಾ ವ್ಯಾಯಾಮಗಳ ಬಗ್ಗೆ ವಿವರಿಸುತ್ತ ಅವರು, ‘ಅದು ಪಾಕಿಸ್ಥಾನದಲ್ಲಿನ ಭಯೋತ್ಪಾದನೆಯ ವಿರುದ್ಧದ ಕಾರ್ಯಾಚರಣೆಗಳನ್ನು ಆಧುನಿಕರಣಕ್ಕೆ ಸಂಬಂಧಿತವಾಗಿತ್ತು’ ಎಂದು ಹೇಳಿದ್ದಾರೆ.
ಐಸಿಸ್ ಎನ್ನುವುದು ಜಾಗತಿಕ ಭಯೋತ್ಪಾದಕ ಸಂಸ್ಥೆ, ಅದು ಜಾಗತಿಕ ಮಟ್ಟದಲ್ಲಿನ ಅಪಾಯದ ಸಂಕೇತವಾದೆ ಮತ್ತು ಅದು ಕೇವಲ ಮಧ್ಯಪ್ರಾಚ್ಯದಲ್ಲಿ ಮಾತ್ರವಲ್ಲ ರಷ್ಯಾ, ಭಾರತ ಹಾಗೂ ಪಾಕಿಸ್ಥಾನದಲ್ಲಿಯೂ ಸಹ ಭಯೋತ್ಪಾದನೆಯನ್ನು ಹುಟ್ಟಿಸುತ್ತಿದೆ ಎಂದು ಹೇಳಿದ್ದಾರೆ. ಆದ್ದರಿಂದ, ಜಂಟಿ ಸೇನಾ ಕಾರ್ಯಾಚರಣೆಗಳು ಮಹತ್ವವನ್ನು ಪಡೆದಿದ್ದು, ಯಾವುದೇ ರೀತಿಯಲ್ಲಿ ಭಾರತವನ್ನು ಗುರಿಯಾಗಿಟ್ಟುಕೊಂಡು ಅಥವಾ ಬೇರೆ ಯಾವುದೇ ಪ್ರದೇಶದಲ್ಲಿನ ಸಂಘರ್ಷವನ್ನಲ್ಲ ಎಂದು ಸೆರ್ಜೇ ಕೆಮೆಝೋವ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಶನಿವಾರ ಪಣಜಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತ ಮತ್ತು ರಷ್ಯಾ ಮೂಲಸೌಕರ್ಯ, ರಕ್ಷಣೆ, ಹಡಗು ನಿರ್ಮಾಣ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ರೈಲು ವಿಭಾಗಗಳನ್ನು ಒಳಗೊಂಡ ೧೬ ಒಪ್ಪಂದಗಳು ಹಾಗೂ ೩ ಪ್ರಕಟಣೆಗಳಿಗೆ ಸಹಿ ಹಾಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಷ್ಯಾದ ಅಧ್ಯಕ್ಷ ವ್ಲಾದಿಮಿರ ಪುತಿನ್ ಅವರ ಸಮ್ಮುಖದಲ್ಲಿ ಈ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.