ಮೂಡಬಿದರೆ : ಕ್ರೀಡೆಯು ಉತ್ತಮ ಆರೋಗ್ಯಕ್ಕೆ ಸಹಾಯಕ. ಕ್ರೀಡಾಕೂಟಗಳಲ್ಲಿ ಮಾನವೀಯತೆ ಬಂದಾಗ ಕ್ರೀಡಾಳುಗಳಲ್ಲಿ ಸ್ನೇಹ, ಭಾಂಧವ್ಯ ವೃದ್ಧಿಸುತ್ತದೆ ಎಂದು ಬಿಪಿಎಡ್ನ ತರಬೇತುದಾರ ಉದಯ್ಕುಮಾರ್ ಹೇಳಿದರು.
ಮೂಡಬಿದರೆಯ ಸ್ವರಾಜ್ಯ ಮೈದಾನದಲ್ಲಿ ಆಳ್ವಾಸಿನ ಬಿಪಿಎಡ್ ಹಾಗೂ ಎಮ್ಪಿಎಡ್ ವಿಭಾಗ ಆಯೋಜಿಸಿದ್ದ ಗುಡ್ಡಗಾಡು ಸ್ಪರ್ಧೆಗೆ ಚಾಲನೆ ನೀಡಿ, ಇವತ್ತಿನ ಕ್ರಾಸ್ಕಂಟ್ರಿ ಇಂಟ್ರಮೋರಲ್ ಕ್ರೀಡಾಕೂಟದಲ್ಲಿ ಪ್ರತಿಯೊಬ್ಬ ಕ್ರೀಡಾಳುಗಳು ಉತ್ತಮ ಪ್ರದರ್ಶನ ತೋರಿದ್ದಾರೆ. ಪ್ರತಿಯೊಬ್ಬ ಕ್ರೀಡಾಪಟುವಿನಲ್ಲಿ ಕ್ರೀಡಾಭಿಮಾನವೀರಬೇಕು. ಇಂತಹ ಅನೇಕ ಕ್ರೀಡಾಕೂಟಗಳು ಕ್ರೀಡಾಪಟುಗಳಿಗೆ ಭದ್ರ ಬುನಾದಿಯಾಗುತ್ತವೆ ಎಂದು ಹೇಳಿದರು. ಈ ಕ್ರೀಡಾಕೂಟದಲ್ಲಿ ಆಳ್ವಾಸಿನ ಬಿಪಿಎಡ್ ಹಾಗೂ ಎಮ್ಪಿಎಡ್ ನ 80 ಕ್ಕೂ ಹೆಚ್ಚು ವಿದ್ಯಾರ್ಥಿಗಳು 7 ಕೀ.ಮೀ ಓಡಿದರು.
ಫಲಿತಾಂಶ:
ಕ್ರಾಸ್ಕಂಟ್ರಿ ಇಂಟ್ರಮೋರಲ್ ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ಸಿದ್ದಪ್ಪ (ಪ್ರಥಮ) ಶಿವಾನಂದ (ದ್ವಿತಿಯ) ಚರಣೆತೇಜ್ (ತೃತಿಯ) ಸ್ಥಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ ಅಕ್ಷತಾ ಪಿ.ಎಲ್ (ಪ್ರಥಮ) ಮದರಾ (ದ್ವಿತಿಯ) ಪಲ್ಲವಿ (ತೃತಿಯ) ಸ್ಥಾನಗಳಿಸಿದರು. ಕರ್ನಾಟಕ ಸರ್ಕಾರದಿಂದ ಕ್ರೀಡಾರತ್ನ ಪಡೆದ ಕ್ರೀಡಾಳುಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಕ್ರೀಡಾಕೂಟದ ತಂಡವಾರು ವಿಭಾಗದಲ್ಲಿ ಭಗತ್ಸಿಂಗ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.