×
Home About Us Advertise With s Contact Us

ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಅಭಿನಂದನೀಯ

ಬೆಳ್ತಂಗಡಿ : ವಾಹನ ಚಾಲನೆ ಮಾಡುವಾಗ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ಮೂಲಕ ಅತೀ ಹೆಚ್ಚಿನ ಅವಘಡಗಳನ್ನು ತಪ್ಪಿಸಬಹುದು. ಅತಿಯಾದ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ ರಸ್ತೆ ಅಪಘಾತಗಳಿಗೆ ಮುಖ್ಯ ಕಾರಣ. ಈ ನಿಟ್ಟಿನಲ್ಲಿ ವಾಹನ ಚಾಲಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಅಭಿನಂದನೀಯ ಎಂದು ಪುತ್ತೂರು ಪ್ರಾದೇಶಿಕ ಸಾರಿಗೆ ಕಚೇರಿಯ ಮೋಟಾರ್ ವಾಹನ ನಿರೀಕ್ಷಕ ಶ್ರೀ ಶ್ರೀಧರ ರಾವ್.ಎನ್ ಅವರು ತಿಳಿಸಿದರು.

DSC09039

ಶ್ರೀ ಶ್ರೀಧರ ರಾವ್ ಅವರು ಬೆಳ್ತಂಗಡಿ ರೋಟರಿ ಕ್ಲಬ್ ರಸ್ತೆ ಸುರಕ್ಷತಾ ಜಾಗೃತಿಗಾಗಿ ರಚಿಸಿದ ಕರಪತ್ರವನ್ನು ಬೆಳ್ತಂಗಡಿಯ ಎಪಿಎಂಸಿ ಯಾರ್ಡಿನಲ್ಲಿ ಬಿಡುಗಡೆ ಮಾಡುತ್ತಾ ಮಾತನಾಡುತ್ತಿದ್ದರು. ಆಲೋಚಿಸಿ ಜವಾಬ್ದಾರಿಯುತವಾಗಿ ವಾಹನವನ್ನು ಚಲಾಯಿಸುವುದರಿಂದ ರಸ್ತೆಗಳನ್ನು ಪ್ರತಿಯೊಬ್ಬರಿಗೂ ಸುರಕ್ಷಿತ ತಾಣವನ್ನಾಗಿಸಬಹುದು ಎಂದು ಬೆಳ್ತಂಗಡಿ ರೋಟರಿ ಅಧ್ಯಕ್ಷ ಡಾ.ಎ.ಜಯಕುಮಾರ ಶೆಟ್ಟಿ ತಿಳಿಸಿದರು.

ಕಾರ್ಯಕ್ರಮದಲ್ಲಿ, ರೋಟರಿ ಕಾರ್ಯದರ್ಶಿ ಎಂ.ವೈಕುಂಠ ಪ್ರಭು, ಸ್ಥಳೀಯ ಡ್ರೈವಿಂಗ್ ಸ್ಕೂಲುಗಳ ಮುಖ್ಯಸ್ಥರುಗಳಾದ ಬಿ.ಪಾಂಡುರಂಗ ಭಂಡಾರ್ಕರ್, ಯಶವಂತ ಬಾಳಿಗಾ, ಸಂತೋಷ್, ವಿನ್ಸೆಂಟ್ ಹಾಗೂ ಚಾಲನಾ ಪರವಾನಿಗೆಯನ್ನು ಪಡೆಯಲು ಆಗಮಿಸಿದ ಅಭ್ಯರ್ಥಿಗಳು ಉಪಸ್ಥಿತರಿದ್ದರು.

 

Recent News

Back To Top
error: Content is protected !!