ನವದೆಹಲಿ : ಭಾರತೀಯ ಸೇನೆ ಮಾತನಾಡುವುದಿಲ್ಲ ; ತನ್ನ ಅಪ್ರತಿಮ ಶೌರ್ಯವನ್ನು ಕೃತಿರೂಪದಲ್ಲಿ ತೋರಿಸುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ನ ಅರೆರಾ ಹಿಲ್ಸ್ನಲ್ಲಿ ನಿರ್ಮಿಸಲಾದ ಯುದ್ಧ ಸ್ಮಾರಕ ‘ಶೌರ್ಯ ಸ್ಮಾರಕ’ದ ಉದ್ಘಾಟನೆಯನ್ನು ನೆರವೇರಿಸಿದರು. ಇದಕ್ಕೂ ಮುನ್ನ ಲಾಲ್ ಪರೇಡ್ ಮೈದಾನದಲ್ಲಿ ಮಾಜಿ ಸೈನಿಕರ ಸಮಾವೇಶದಲ್ಲಿ ಮಾತನಾಡಿದ ಮೋದಿ ಭಾರತೀಯ ಸೇನೆಯ ಸೀಮಿತ ದಾಳಿಯನ್ನು ಕುರಿತು ಭಾರತೀಯ ಸೇನೆಯು ಮಾತನಾಡುವುದಿಲ್ಲ, ಕೆಲಸ ಮಾಡಿ ತೋರಿಸುತ್ತದೆ ಎಂದು ಭಾರತೀಯ ಸೇನೆ ಮತ್ತು ರಕ್ಷಣಾ ಸಚಿವರನ್ನು ಶ್ಲಾಘಿಸಿದ್ದಾರೆ.
ನಾವು ಸೈನಿಕರ ಕುರಿತು ಮಾತನಾಡುವಾಗ ಅವರ ಸಮವಸ್ತ್ರ ಮತ್ತು ಶೌರ್ಯದ ಬಗ್ಗೆ ಮಾತ್ರ ಮಾತನಾಡುತ್ತೇವೆ. ಆದರೆ ಅವರನ್ನು ಮಾನವೀಯತೆ ನಿದರ್ಶನವನ್ನಾಗಿಯೂ ನೋಡಬೇಕು. ಗಡಿ ಮತ್ತು ದೇಶದ ರಕ್ಷಣೆಯನ್ನೂ ಮೀರಿ ಮಾನವತೆಯ ರಕ್ಷಣೆಗಾಗಿ ತಮ್ಮ ಜೀವವನ್ನು ಮುಡಿಪಾಗಿಟ್ಟವರು ಹಲವರು ಇದ್ದಾರೆ. ಎಂತಹ ರಕ್ಷಣಾ ಕಾರ್ಯದ ಸಂದರ್ಭದಲ್ಲೂ ಅವರು ಮುನ್ನುಗ್ಗಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನೆರೆ ಬಂದ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡು ಅಲ್ಲಿನ ಜನರನ್ನು ರಕ್ಷಿಸುವ ಕಾಯಕದಲ್ಲಿ ತೊಡಗಿಕೊಂಡರು. ಆದರೆ ಇದೇ ಜನರು ತಮ್ಮ ಮೇಲೆ ಕಲ್ಲು ತೂರಾಟ ನಡೆಸಿದ್ದರು ಎಂದು ಭಾವಿಸಲಿಲ್ಲ. ಅವರು ಮಾನವೀಯತೆಯನ್ನು ಮೆರೆಯುವವರು. ಇಂತಹ ಭಾರತೀಯ ಸೈನಿಕರ ಸಹಾಯವನ್ನು ನಾವು ಮರೆಯಲು ಸಾಧ್ಯವಿಲ್ಲ. ಶೌರ್ಯ ಸ್ಮಾರಕವು ಸೈನಿಕರ ದೇಶಭಕ್ತಿಯ ಪಯಣದ ಪ್ರತೀಕ. ಈ ಐತಿಹಾಸಿಕ ದಿನದಂದು ನಮ್ಮ ಧೈರ್ಯಶಾಲಿ ಸೈನಿಕರಿಗೆ ಗೌರವ ಸಲ್ಲಿಸಲು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯವೇ ಸರಿ ಎಂದು ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.