ಬರಾರಾ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ನಿರ್ಮಿಸಿರುವ 210 ಅಡಿ ಎತ್ತರದ ರಾವಣ ಹಲವು ವರ್ಷಗಳಿಂದ ಲಕ್ಷಾಂತರ ಜನರ ಆಕರ್ಷಣೆಯಾಗಿದೆ.
ಚಂಡೀಗಢದಿಂದ ಸುಮಾರು 60 ಕಿ.ಮೀ. ದೂರದಲ್ಲಿರುವ ಹರ್ಯಾಣದ ಬರಾರಾ ಗ್ರಾಮದಲ್ಲಿ ದಶಕಗಳಿಂದ ಸ್ಥಾಪಿಸಲಾಗಿರುವ ರಾವಣನ ಬೊಂಬೆ ಅನನ್ಯ ಖ್ಯಾತಿಯನ್ನು ಪಡೆದಿದೆ.
60 ಟನ್ ಅಥವಾ 6000 ಕೆಜಿ ತೂಕದ ರಾವಣನ ಬೊಂಬೆ, 210 ಅಡಿ ಎತ್ತರವಿದೆ. ಇದನ್ನು ನಿರ್ಮಿಸಲು ಸುಮಾರು 3,500 ಕೆಜಿ ಕಬ್ಬಿಣ, 1,500 ಕೆಜಿ ಬಿದಿರು, 250 ಕೆಜಿ ಫೈಬರ್, 100 ಕೆಜಿ ಪೇಪರ್, 100 ಕೆಜಿ ಬಟ್ಟೆ, 300 ಕೆಜಿ ಹಗ್ಗ, 100 ಕೆಜಿ ಅಂಟು, 100 ಕೆಜಿ ಪಟಾಕಿ ಮತ್ತು ವಿದ್ಯುತ್ ಸಾಧನಗಳ ಅಗತ್ಯವಿದೆ.
ಇದನ್ನು ತಯಾರಿಸಲು ದೇಶದ ವಿವಿಧ ಭಾಗಗಳಿಂದ 150 ಕಲಾವಿದರು ಆಗಮಿಸುತತಿದ್ದು, 8 ತಿಂಗಳ ಕಾಲ ಸಮಯ ತಗಲುತ್ತದೆ. ಇದರ ನಿರ್ಮಾದ ಅಂದಾಜು ವೆಚ್ಚ ಸುಮಾರು 25 ಲಕ್ಷ (3,75,000 ಡಾಲರ್) ರೂ. ಆಗಿದೆ.
ಬಾರಾvರಾ ಗ್ರಾಮದ ಸ್ಥಳೀಯ ಜಮೀನದಾರ ತೇಜಿಂದರ್ ಸಿಂಗ್ ಚಾಹಾಣ್ ನೇತೃತ್ವದ ಶ್ರೀ ರಾಮಲೀಲಾ ಕ್ಲಬ್ ಇದರ ನಿರ್ಮಾಣದ ಸೂತ್ರಧಾರ.
ಇದರ ನಿರ್ಮಾಣಕ್ಕೆ ಸಾಕಷ್ಟು ಸಮಯ, ಹಣ ಮತ್ತು ಶ್ರಮದ ಅಗತ್ಯವಿದ್ದು, ಇದನ್ನು ಎತ್ತಲು ಕ್ರೇನ್ಗಳು ಮತ್ತು ಜನರ ಅಗತ್ಯವಿದೆ ಎಂದು ತೇಜಿಂದರ್ ಸಿಂಗ್ ಹೇಳಿದ್ದಾರೆ.
2007ರಲ್ಲಿ 151 ಅಡಿ ಎತ್ತರದಿಂದ ಆರಂಭಗೊಂಡು 2008ರಲ್ಲಿ 171 ಅಡಿ, 2009ರಲ್ಲಿ 175 ಅಡಿ ಮತ್ತು 2014ರಲ್ಲಿ 210 ಅಡಿ ತಲುಪಿದೆ. ರಾವಣನ ಈ ಬೊಂಬೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ 5 ಬಾರಿ ಹೆಸರು ಪಡೆದಿದೆ.
ರಾಕ್ಷಸ ರಾಜ ರಾವಣ ವಿರುದ್ಧ ಶ್ರೀರಾಮನ ವಿಜಯದ ಸಂಕೇತವಾಗಿ ವಿಜಯದಶಮಿ ಅಥವಾ ದಸರಾ ಹಬ್ಬವನ್ನು ಆಚರಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.